ಸಿಎಂ ಆಗ್ಲಿಕ್ಕೆ ಅರ್ಜೆಂಟ್ ಇಲ್ಲ…20 ವರ್ಷ ನಂತರ ನೋಡುವಾ – ಸ್ಪೀಕರ್ ಖಾದರ್

ಮಂಗಳೂರು: ಸಿಎಂ ಆಗ್ಲಿಕ್ಕೆ ಅರ್ಜೆಂಟ್ ಇಲ್ಲ..ಅದಕ್ಕಿನ್ನೂ 20 ವರ್ಷ ಕಾಲಾವಕಾಶ ಇದೆ‌. ಕ್ಷೇತ್ರದ ಮತದಾರರು ಇನ್ನೂ ನಾಲ್ಕು ಸಲ ಗೆಲ್ಲಿಸಿ ಕಳುಹಿಸಿದರೆ, ಅಮೇಲೆ ನೋಡುವ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಹುದ್ದೆಗೆ ತಾವೂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ‘ಅದಕ್ಕೆ ತರಾತುರಿ ಇಲ್ಲ. ಅದಕ್ಕಿನ್ನೂ 20 ವರ್ಷ ಕಾಲಾವಕಾಶ ಇದೆ‌ ಎಂದರು. ಬಳ್ಳಾರಿ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಶಾಸಕರು ಸಿನಿಮೀಯ ಶೈಲಿಯಲ್ಲಿ ಪರಸ್ಪರ ಕಚ್ಚಾಡುವುದು, ರಾಜಕೀಯ ದ್ವೇಷ ಸಾಧಿಸುವುದು ಸರಿಯಲ್ಲ. ಇ‌ಂತಹ ಘಟನೆಯಿಂದ ಜನಪ್ರತಿನಿಧಿಗಳ ಗೌರವ ಕಡಿಮೆ ಆಗುತ್ತದೆ. ಕೆಲವೇ ಕೆಲವು ಜನಪ್ರತಿನಿಧಿಗಳ ಈ ರೀತಿಯ ನಡವಳಿಕೆಯಿಂದ ಇತರರನ್ನೂ ಜನ ಅದೇ ದೃಷ್ಟಿಯಿಂದ ನೋಡುತ್ತಾರೆ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!