ಕಾಸರಗೋಡು ಗೋ-ಕುಟೀರಕ್ಕೆ ದೇಶೀಯ ತಳಿ ಗೋವುಗಳ ದಾನಕ್ಕೆ ಆಹ್ವಾನ

ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ಗೋ-ಕುಟೀರಕ್ಕೆ ಶುದ್ಧ ದೇಶೀಯ ತಳಿ ಹಾಗೂ ಗಿಡ್ಡ ತಳಿಯ ಗೋವುಗಳನ್ನು ದಾನ ರೂಪದಲ್ಲಿ ನೀಡಲು ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ. ಕಾಸರಗೋಡು ಜಿಲ್ಲೆ ಸೇರಿದಂತೆ ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗೋ-ಭಕ್ತರು, ಗೋ-ಪೋಷಕರು ಹಾಗೂ ಭಗವದ್ಭಕ್ತರ ಸಹಕಾರದೊಂದಿಗೆ ಈ ಯೋಜನೆಯನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ವತಿಯಿಂದ ಸ್ಥಾಪಿಸಲಾಗುತ್ತಿರುವ ಈ ಗೋ-ಕುಟೀರದಲ್ಲಿ ಕಾಸರಗೋಡು ಗಿಡ್ಡ ತಳಿ, ಮಲೆನಾಡು ಗಿಡ್ಡ ತಳಿ ಸೇರಿದಂತೆ ಶುದ್ಧ ದೇಶೀಯ ತಳಿಯ ಗೋವುಗಳನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ. ಗೋ-ದಾನಿಗಳಿಂದ ಹಾಲು ಕೊಡುವ ದನಗಳು, ಕರುಗಳು ಅಥವಾ ಹೆಣ್ಣು ಕರುಗಳನ್ನು ದಾನವಾಗಿ ನೀಡಬಹುದಾಗಿದ್ದು, ಗೋವುಗಳನ್ನು ಪೋಷಿಸಲು ಪ್ರಾಯೋಜಕತ್ವ ವಹಿಸುವ ಅವಕಾಶವೂ ಕಲ್ಪಿಸಲಾಗಿದೆ.

ಸುಮಾರು ₹25 ಲಕ್ಷ ವೆಚ್ಚದಲ್ಲಿ ಗೋ-ಕುಟೀರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಕಾಸರಗೋಡು ಪ್ರದೇಶದ ಗೋ-ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಇದನ್ನು ರೂಪಿಸುವ ಯೋಜನೆ ಹೊಂದಲಾಗಿದೆ. ದೇವಾಲಯಗಳು, ಮಠಗಳು, ದೈವಸ್ಥಾನಗಳು ಹಾಗೂ ವಿವಿಧ ಧಾರ್ಮಿಕ ಉತ್ಸವಗಳಲ್ಲಿ ಗೋವುಗಳ ಆರಾಧನೆಗಾಗಿ ಸಹ ಈ ಕೇಂದ್ರವನ್ನು ಬಳಸಿಕೊಳ್ಳುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ.

ಇದೇ ವೇಳೆ ಧಾರ್ಮಿಕ ಪೂಜಾ ಕಾರ್ಯಗಳಿಗೆ ಅಗತ್ಯವಿರುವ ಗೋ-ಮೂತ್ರ, ಪಂಚಗವ್ಯ, ಗೋ-ಸಗಣಿ ಹಾಗೂ ಗೋ-ಮಯ ಮುಂತಾದವುಗಳನ್ನು ಅಗತ್ಯವಿರುವವರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡುವ ಯೋಜನೆಯೂ ರೂಪಿಸಲಾಗಿದೆ. ಗೋ-ಭಕ್ತರು ಒಂದು ವರ್ಷದ ಅವಧಿಗೆ ಗೋವುಗಳನ್ನು ದತ್ತು ಪಡೆದು ಗೋಗ್ರಾಸ ನೀಡುವ ಮೂಲಕ ಗೋ-ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶವೂ ಇರಲಿದೆ ಎಂದು ತಿಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ಅವರು, ಗೋ-ಭಕ್ತರು ಮತ್ತು ದಾನಿಗಳು ಈ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಸಂಪರ್ಕ:
ಮೊಬೈಲ್ – 9448572016
ಇ-ಮೇಲ್ – shivaramakasaragod@gmail.com
ಗೂಗಲ್ ಪೇ – 9448572016

ಗೋ-ಕುಟೀರಕ್ಕೆ ಗೋವುಗಳನ್ನು ದಾನ ಮಾಡುವವರು ಅಥವಾ ಪ್ರಾಯೋಜಕತ್ವ ವಹಿಸಲು ಇಚ್ಛಿಸುವವರು ಮೇಲ್ಕಂಡ ಸಂಪರ್ಕಕ್ಕೆ ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!