ಮಂಜೇಶ್ವರ: ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ ಉಪ್ಪಳ, ಪೈವಳಿಗೆ, ವರ್ಕಾಡಿ ಮತ್ತು ಮೀಂಜ ಪಂಚಾಯತ್ ಪ್ರದೇಶಗಳ ವಿವಿಧ ಕಡೆಗಳಲ್ಲಿ ನಿನ್ನೆದಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
110 ಕೆವಿ ವಿದ್ಯುತ್ ಲೈನ್ನಲ್ಲಿ ಉಂಟಾದ ದೋಷದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದ್ದು, ತಕ್ಷಣವೇ ಇದನ್ನು ಸರಿಪಡಿಸುವಂತೆ Democratic Youth Federation of India (ಡಿವೈಎಫ್ಐ) ಮಂಜೇಶ್ವರ ಬ್ಲಾಕ್ ಸಮಿತಿ ಆಗ್ರಹಿಸಿದೆ.
ಈ ಕುರಿತು ಡಿವೈಎಫ್ಐ ವತಿಯಿಂದ ವಿದ್ಯುತ್ ಇಲಾಖೆ ಸಚಿವರಾದ K Krishnankutty ಅವರಿಗೆ ಮನವಿ ಸಲ್ಲಿಸಲಾಗಿದೆ. ಪ್ರಸ್ತುತ ಎಸ್ಎಸ್ಎಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳ ಕಾಲ ಹಾಗೂ ರಮಝಾನ್ ಉಪವಾಸದ ಸಮಯವಾಗಿರುವುದರಿಂದ ವಿದ್ಯುತ್ ವ್ಯತ್ಯಯ ಜನರಿಗೆ ಹೆಚ್ಚಿನ ತೊಂದರೆ ಉಂಟುಮಾಡುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ವಿದ್ಯುತ್ ವ್ಯತ್ಯಯವನ್ನು ಶೀಘ್ರದಲ್ಲಿ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಡಿವೈಎಫ್ಐ ಪ್ರಕಟಣೆಯಲ್ಲಿ ಒತ್ತಾಯಿಸಿದೆ.