ಬದಿಯಡ್ಕ: ನೆಕ್ರಾಜೆಯ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ವಸುದೈವ ಕುಟುಂಬಕಂ ಗೋಪ್ರಿಯರು – ಗೋವಿಂದ ಪುಣ್ಯಕೋಟಿ ಗೋಶಾಲೆಯ ಪ್ರವೇಶೋತ್ಸವ ಮಾರ್ಚ್ 4ರಂದು ಬುಧವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಭಕ್ತಿಭಾವದಿಂದ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅರ್ಚಕರ ನೇತೃತ್ವದಲ್ಲಿ ಪ್ರದಕ್ಷಿಣೆ ನಡೆಸಿ ಗೋವುಗಳನ್ನು ಶ್ರದ್ಧಾಭಕ್ತಿಯಿಂದ ಗೋಶಾಲೆಗೆ ಬರಮಾಡಿಕೊಳ್ಳಲಾಯಿತು. ಗೋಪೂಜೆ ನೆರವೇರಿಸಿ ಗೋವುಗಳಿಗೆ ಗೋಗ್ರಾಸವನ್ನು ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಗೋಪಾಲಕೃಷ್ಣ ಪೈ ಬದಿಯಡ್ಕ, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಆಡಳಿತ ಮೊಕ್ತೇಸರ ಪ್ರತಾಪ್ ರೈ ನೆಕ್ರಾಜೆ, ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿ ಗಣೇಶ ವತ್ಸ ನೆಕ್ರಾಜೆ, ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್ ಕೊಡಾಕೊಳ್ಳು, ಉಪಾಧ್ಯಕ್ಷ ನಿತ್ಯಾನಂದ ನೆಲ್ಲಿತ್ತಲ ಉಪಸ್ಥಿತರಿದ್ದರು.
ಇದೇ ವೇಳೆ ಗೋಶಾಲೆ ಸಮಿತಿಯ ಗೌರವಾಧ್ಯಕ್ಷ ರಾಮಚಂದ್ರ ಬಲ್ಲಾಳ್ ನೆಕ್ರಾಜೆ, ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ ನೆಕ್ರಾಜೆ, ಕೋಶಾಧಿಕಾರಿ ರಮೇಶ್ ಮಾವಿನಕಟ್ಟೆ ಸೇರಿದಂತೆ ಭಗವದ್ಭಕ್ತರು ಹಾಗೂ ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನೆಕ್ರಾಜೆ ಅವರು ಶುದ್ಧ ದೇಶೀಯ ತಳಿಯ ಗೋವುಗಳನ್ನು ಉದಾರವಾಗಿ ದಾನವಾಗಿ ನೀಡಿದರು. ಊರಿನ ಹಾಗೂ ಪರವೂರಿನ ಭಗವದ್ಭಕ್ತರು ಮತ್ತು ಗೋಪ್ರೇಮಿಗಳ ಸಹಕಾರದೊಂದಿಗೆ ಈ ಗೋಶಾಲೆ ನಿರ್ಮಾಣಗೊಂಡಿದೆ.
Alright, let’s log in to 80jili! Click 80jili login and let the fun begin! Good luck everyone playing tonight!
66b1 seems alright. Nothing spectacular, but decent game selection. Give it a shot and see if it’s your lucky spot! 66b1
Heard some buzz about 79fbet and decided to try it. It’s alright. Games are what you’d expect. I’d say give it a go if you’re bored. 79fbet