ಕುಂಭಮೇಳ ವೈರಲ್ ಗರ್ಲ್ ಮೊನಾಲಿಸಾ ಮದುವೆ: ಕೇರಳದಲ್ಲಿ ಪ್ರೇಮ ವಿವಾಹ

ತಿರುವನಂತಪುರಂ: ಮಹಾಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿ ಮೊನಾಲಿಸಾ ಭೋಸ್ಲೆ ಮತ್ತೆ ಸುದ್ದಿಯಲ್ಲಿದ್ದು, ತಮ್ಮ ಪ್ರೇಮಿ ಫಾರ್ಮನ್ ಖಾನ್ ಅವರೊಂದಿಗೆ ಕೇರಳದಲ್ಲಿ ವಿವಾಹವಾಗಿದ್ದಾರೆ.

ಮೊನಾಲಿಸಾ 2025ರ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದಾಗ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅವರು ಜನಪ್ರಿಯರಾಗಿದ್ದರು.

ಇತ್ತೀಚೆಗೆ ಅವರು ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನದಲ್ಲಿ ಫಾರ್ಮನ್ ಖಾನ್ ಜೊತೆ ಮದುವೆಯಾದರು. ಮದುವೆ ಕಾರ್ಯಕ್ರಮಕ್ಕೆ ಭಾರೀ ಜನಸ್ತೋಮ ಕೂಡ ಸೇರಿದ್ದರಿಂದ ಪೊಲೀಸರು ಭದ್ರತೆ ಒದಗಿಸಿದ್ದರು ಎಂದು ವರದಿಯಾಗಿದೆ.

ಈ ಜೋಡಿ ಕೆಲವು ತಿಂಗಳಿನಿಂದ ಪ್ರೀತಿಯಲ್ಲಿ ಇದ್ದರು. ವಿಭಿನ್ನ ಧರ್ಮದವರಾಗಿರುವ ಕಾರಣ ಇಬ್ಬರ ಕುಟುಂಬಗಳಿಂದ ವಿರೋಧ ವ್ಯಕ್ತವಾಗಿದ್ದರೂ, ಅವರು ತಮ್ಮ ನಿರ್ಧಾರವನ್ನು ಮುಂದುವರೆಸಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!