ಕಾಸರಗೋಡು: ಅಂಜೆ ಸಮೀಪದ ಬೆಳ್ಳೂರು, ಕಾಯಿಮಲೆದಲ್ಲಿರುವ ಶ್ರೀ ಗುಳಿಗ – ಶ್ರೀ ಕೊರಗ ತನಿಯ ಸನ್ನಿಧಿಯಲ್ಲಿ ನೇಮೋತ್ಸವವು ಮಾರ್ಚ್ 14 ಮತ್ತು 15, 2026 ರಂದು ಶನಿವಾರ ಮತ್ತು ರವಿವಾರ ಭಕ್ತಿಭಾವದಿಂದ ನಡೆಯಲಿದೆ.
ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭಮಾಸದ 20ನೇ ದಿನವಾದ ಮಾರ್ಚ್ 14ರಂದು ಶ್ರೀ ಸನ್ನಿಧಿಯಲ್ಲಿ ಶ್ರೀ ಗುಳಿಗ ಹಾಗೂ ಶ್ರೀ ಕೊರಗತನಿಯ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು–ಮನ–ಧನಗಳಿಂದ ಸಹಕರಿಸಿ ದೈವಗಳ ಅರಸಿನ ಹುಡಿ ಮತ್ತು ಕರಿಗಂಧ ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಉತ್ಸವ ಸಮಿತಿ ಮನವಿ ಮಾಡಿದೆ.
ಕಾರ್ಯಕ್ರಮಗಳ ವಿವರ
ಮಾ. 14 (ಶನಿವಾರ):
ಬೆಳಗ್ಗೆ 8.00 ಗಂಟೆಗೆ ಗಣಪತಿ ಹವನ ನಡೆಯಲಿದೆ.
ಬೆಳಗ್ಗೆ 9.00 ಗಂಟೆಗೆ ಊರ ಮತ್ತು ಪರವೂರ ಭಕ್ತರಿಂದ ಭಜನಾ ಸಂಕೀರ್ತನ ನಡೆಯಲಿದೆ.
ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 2.30ಕ್ಕೆ ಶ್ರೀ ಗುಳಿಗ ದೈವದ ಭಂಡಾರ ಇಳಿಯುವುದು.
ಮಧ್ಯಾಹ್ನ 3.30ರಿಂದ ಶ್ರೀ ಗುಳಿಗ ದೈವದ ಕೋಲ ನಡೆಯಲಿದೆ.
ಸಂಜೆ 5.00ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 6.30ಕ್ಕೆ ಶ್ರೀ ಕೊರಗತನಿಯ ದೈವದ ಭಂಡಾರ ಇಳಿಯುವುದು.
ರಾತ್ರಿ 8.30ರಿಂದ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 9.30ಕ್ಕೆ ಶ್ರೀ ಕೊರಗತನಿಯ ದೈವದ ಕೋಲ ನಡೆಯಲಿದೆ.
ಮಾ. 15 (ರವಿವಾರ):
ಪ್ರಾತಃಕಾಲ 5.00 ಗಂಟೆಗೆ ಶ್ರೀ ದೈವದ ಪ್ರಸಾದ ವಿತರಣೆ ನಡೆಯಲಿದೆ.
ವಿಶೇಷ ಸೂಚನೆ
ನೇಮೋತ್ಸವದ ಅಂಗವಾಗಿ ಅಕ್ಕಿ, ತೆಂಗಿನಕಾಯಿ, ಸಿಯಾಳ, ಹಿಂಗಾರ, ತುಪ್ಪ, ಎಣ್ಣೆ, ತರಕಾರಿ ಹಾಗೂ ಹೂವುಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಸಮಿತಿ ತಿಳಿಸಿದೆ. ನೇಮೋತ್ಸವದ ಸಂದರ್ಭದಲ್ಲಿ ಕಲಶಸೇವೆ ಹಾಗೂ ಅನ್ನದಾನ ಸೇವೆ ಮಾಡಲು ಬಯಸುವವರು ಕೌಂಟರ್ನಲ್ಲಿ ಸಮಿತಿ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು.
ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಪ್ರಧಾನ ಪಾತ್ರಿ ಸುಧಾಕರ ಕಾಯಿಮಲೆ, ಗೌರವಾಧ್ಯಕ್ಷ ಗಂಗಾಧರ ಬಲ್ಲಾಳ್ ಅಡ್ಡಳಬೀಡು, ಅಧ್ಯಕ್ಷ ರವೀಂದ್ರನಾಥ ರೈ ಮಿತ್ತಮಜಲು, ಕಾರ್ಯದರ್ಶಿ ಅಶೋಕ ರೈ ಮೊಟ್ಟಕುಂಜ ಹಾಗೂ ಖಜಾಂಚಿ ಸಚಿನ್ ರಾಜ್ ಕಾಯಿಮಲೆ ಅವರ ನೇತೃತ್ವದಲ್ಲಿ ಸೇವಾ ಸಮಿತಿ ಮತ್ತು ಉತ್ಸವ ಸಮಿತಿ ಸದಸ್ಯರು ನೋಡಿಕೊಳ್ಳುತ್ತಿದ್ದಾರೆ.