ಅನ್ವರ್ ಯು ಡಿ ಎಫ್ ಪ್ರವೇಶ ಕ್ಕೆ ಹಸಿರು ನಿಶಾನೆ.

‘ಯಾವ ಕೀಲಿ ಕೈ ಯಿಂದ, ಬಾಗಿಲು ಮುಚ್ಚಲಾಗಿದೆಯೋ, ಅದೇ ಕೀಲಿ ಕೈಯಿಂದ ಬಾಗಿಲು ತೆರೆಯಲು ಸಾಧ್ಯವಿದೆ”: ಸನ್ನಿ ಜೋಸೆಫ್.

ತಿರುವನಂತಪುರಂ. ತೀವ್ರ ಕುತೂಹಲ ಕೆರಳಿಸಿದ ನಿಲಂಬುರ್ ಉಪಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ದ್ರುವೀಕರಣ ಆಗುವ ಸಾಧ್ಯತೆಗಳಿದ್ದು ಮುಂಬರುವ ಸ್ಥಳೀಯಾಡಳಿತ ಹಾಗೂ ರಾಜ್ಯ ವಿಧಾನಸಭೆಯ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ.


ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ ಪಿ ಬಿ ಅನ್ವರ್ ಪಡೆದ ಮತಗಳಿಕೆಯ ಅಂಕಿ ಅಂಶಗಳು ನೂತನ ರಾಜಕೀಯ ದ್ರುವೀಕರಣಕ್ಕೆ ಕಾರಣವಾಗುತ್ತಿದೆ. ಅನ್ವರ್ ರನ್ನು UDFತೆಕ್ಕೆಗೆ ಸೇರಿಸಿಕೊಂಡು ಮುಂಬರುವ ಸ್ಥಳೀಯಾಡಳಿತ ಚುನಾವಣೆ ಎದುರಿಸಲು UDFನ ಒಂದು ವಿಭಾಗ ಉತ್ಸುಕವಾಗಿದೆ.

ಮುಖ್ಯಮಂತ್ರಿ ಪಿಣ ರಾಯಿ ವಿಜಯನ್ ಹಾಗೂ CPIMನ್ನು ಖಂಡ ತುಂಡವಾಗಿ ಟೀಕಿಸುವ ಅನ್ವರನ್ನು ಯು ಡಿ ಎಫ್ ಗೆ ಸೇರಿಸಿದರೆ ಪಕ್ಷಕ್ಕೆ ಅನುಕೂಲವಿರಬಹುದು ಎಂದು ಕೆಲವು ಕಾಂಗ್ರೆಸ್ ನಾಯಕರ ವಾದವಾಗಿದೆ.


ಚುನಾವಣೆ ಪೂರ್ವದಲ್ಲಿ ಅನ್ವರ್ ಯು ಡಿ ಎಫ್ ಗೆ ಬರುವ ಬಗ್ಗೆ ಸುಧೀರ್ಘವಾದ ಚರ್ಚೆ ನಡೆದು ವಿಪಕ್ಷ ನಾಯಕ ವಿ. ಡಿ ಸತೀಶನ್ ರ ಬಗ್ಗೆ ಟೀಕೆ ಮಾಡಿ ಮುನಿಸಿ ಕೊಂಡಿದ್ದರು. ಅನ್ವರ್ ಯಡಿಎಫ್ ಪ್ರವೇಶಕ್ಕೆ ಬಾಗಿಲು ಮುಚ್ಚಿದೆ ಎಂಬ ಹೇಳಿಕೆ ನೀಡಿ ಪರೋಕ್ಷವಾಗಿ ಅನ್ವರ್ ಅನ್ನು ಯುಡಿಎಫ್ ಗೆ ಸೇರಿಸುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.ಅನ್ವರ್ ರನ್ನು ಯು ಡಿ ಎಫ್ ಗೆ ಸೇರಿಸಲು ಕಾಂಗ್ರೆಸ್ ಮತ್ತು ಯು ಡಿ ಎಫ್ ನ ಕೆಲವು ನಾಯಕರಿಗೆ ದ್ವಂದ್ವ ಅಭಿಪ್ರಾಯ ಗಳಿತ್ತು.


ಆದರೆ ಇದೀಗ ಚುನಾವಣೆಯ ಫಲಿತಾಂಶದ ನಂತರ ಬೆರಗಾದ ಯುಡಿಎಫ್ ನಾಯಕರು ಅನ್ವರ್ ರನ್ನು ಸೇರಿಸಿಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅನ್ವರ್ ಯುಡಿಎಫ್ ಪ್ರವೇಶಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಯಾವ ಕೀಲಿ ಕೈಯಿಂದ ಬಾಗಿಲು ಮುಚ್ಚಿದೆಯೋ, ಅದೇ ಕೀಲಿ ಕೈಯಿಂದ ಬಾಗಿಲು ತೆರೆಯಲು ಸಾಧ್ಯವಿದೆ ಎಂದು ಮಾರ್ವಿಕವಾಗಿ ಹೇಳಿದ್ದಾರೆ.

ಅನ್ವರ್ ಸೇರ್ಪಡೆ ವಿಷಯದಲ್ಲಿ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ನೋ ಕಮೆಂಟ್ಸ್ ಎಂದಿದ್ದಾರೆ. ಪಕ್ಷದ ಹೆಚ್ಚಿನ ನಾಯಕರು ಅನ್ವರ್ ತೆಕ್ಕೆಗೆ ಬಂದರೆ ಮುಂಬರುವ ತ್ರಿಸ್ತರ ಪಂಚಾಯತಿ ಚುನಾವಣೆ ವಿಧಾನಸಭಾ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂದಿದ್ದಾರೆ.


ಮುಖ್ಯಮಂತ್ರಿ ಪೀನರಾಯಿ ವಿಜಯನ್ ಹಾಗೂ LDFನ ಬಗ್ಗೆ ಟೀಕೆಗಳನ್ನು ಮುಂದುವರಿಸಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಳಿಯ ಹಾಗೂ ಸಚಿವರ ಸ್ವ ಕ್ಷೇತ್ರವಾದ ಬೇಪೂರ್ ವಿಧಾನಸಭಾ ಕ್ಷೇತ್ರದಲ್ಲಿ ತಾನು ಸ್ಪರ್ಧೆ ಮಾಡಲಿದ್ದೇನೆ ಎಂದು ನೇರವಾಗಿ ಸವಾಲೊಡ್ಡಿದ್ದಾರೆ.
UDF ತೆಕ್ಕೆಗೆ ಅನ್ವರ್ ಪ್ರವೇಶವಾದರೆ ಇದು ಮುಂಬರುವ ವಿಧಾನ ಚುನಾವಣೆಯಲ್ಲಿ LDFಗೆ ದೊಡ್ಡ ಹೊಡೆತ ಬೀಳಲಿದೆ ಎಂದು ನಾಯಕರ ವಿಶ್ಲೇಷಣೆಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!