ತಿರುವನಂತಪುರಂ : ಕಳೆದ ಬಾರಿ ಸುರಿದ ಕುಂಭ ದ್ರೋಣ ಮಳೆಗೆ ಇಡೀ ಮನುಕುಲವನ್ನೇ ಹೃದಯ ವಿದ್ರಾವಾಹಕ ಸನ್ನಿವೇಶಕ್ಕೆ ತಂದೊಡ್ಡಿದ್ದ ವಯನಾಡು ಜಿಲ್ಲೆಯ ಚೂರುಲ್ ಪೇಟೆಯ ಗುಡ್ಡ ಜರಿತ ಪ್ರದೇಶದಲ್ಲಿ ನಿನ್ನೆಯಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಮತ್ತೆ ಅದೇ ಸ್ಥಿತಿ ಉಂಟಾಗಿದ್ದು ,ಶಾಶ್ವತ ಪರಿಹಾರಕ್ಕೆ ನಾಗರಿಕರು ಸರಕಾರಕ್ಕೆ ಒತ್ತಾಯ ಪಡಿಸಿದ್ದಾರೆ.
ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಯಿಂದ ಅಪಾರವಾದ ನಾಶ ನಷ್ಟ ಉಂಟಾಗಿದ್ದು ,ಸ್ಥಳೀಯರನ್ನು ಸೂಕ್ತವಾದ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.ಸ್ಥಳಕ್ಕಾಗಮಿಸಿದ ದುರಂತ ಪರಿಹಾರ ಸ್ಪೆಷಲ್ ಆಫೀಸರ್ ಹಾಗೂ ಜಿಲ್ಲಾಧಿಕಾರಿಯವರಲ್ಲಿ ತಮ್ಮ ಅಳಲನ್ನು ವ್ಯಕ್ತಪಡಿಸಿದ ಸ್ಥಳೀಯರು ,ಸರಕಾರವು ಈ ತನಕ ಯಾವುದೇ ಶಾಶ್ವತ ಪರಿಹಾರ ಮಾಡಿಲ್ಲ , ನೆರೆ ಬಂದ ಸಂಧರ್ಭದಲ್ಲಿ ಮಾತ್ರ ಇಲ್ಲಿಗೆ ಧಾವಿಸುತ್ತಿದ್ದು , ಸರಕಾರದ ಈ ನಿರ್ಲಕ್ಷವೇ ಈ ಅನಾಹುತಕ್ಕೆ ಕಾರಣವಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು .
ನಿನ್ನೆಯಿಂದ ಸುರಿದ ಮಳೆಯಿಂದ ಅಪಾರ ನಾಶ ನಷ್ಟ ಉಂಟಾಗಿದ್ದು , ಸ್ಥಳೀಯ ಜನರು ಕಂಗಾಲಾಗಿದ್ದಾರೆ.ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಚೂರುಲ್ ಪೇಟೆಯ ಈ ಭೀಕರ ಸಮಸ್ಯೆಗೆ ಸರಕಾರವು ಶೀಘ್ರದಲ್ಲೇ ಶಾಶ್ವತ ಪರಿಹಾರ ಮಾಡಬೇಕಿದೆ.