ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಎಡರಂಗ ಸರ್ವ ಪತನ- ಕಾಂಗ್ರೆಸ್

ಈ ವರ್ಷದ ಅಂತ್ಯದೊಳಗೆ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಭ್ರಷ್ಟ ಹಾಗೂ ವಚನಭ್ರಷ್ಟ ಎಡರಂಗದ ಅಂತ್ಯವಾಗಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ.


ಕಾಂಗ್ರೆಸ್ ನ ಗೃಹ ಸಂದರ್ಶನ ಕಾರ್ಯಕ್ರಮದ ಹಿನ್ನಲೆಯಲ್ಲಿ ನಡೆದ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶ್ರೀ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೇತಾರರಾದ ಶ್ರೀ ಫಾರೂಕ್ ಶಿರಿಯ, ಬರ್ನಾರ್ಡ್ ಡಿ’ಅಲ್ಮೇಡಾ, ಅಶ್ರಫ್ ಮುಟ್ಟಂ, ರಾಜೇಶ್ ನಾಯ್ಕ್, ಬಾಬು ಇಚ್ಲಂಗೋಡು, ಬಶೀರ್ ಹೇರೂರು, ಇಬ್ರಾಹಿಂ ಇಚ್ಲಂಗೋಡು, ಕುಂಞಾಲಿ ಇಚ್ಲಂಗೋಡು, ಗೀತಾ ಬಂದ್ಯೋಡು, ತಾಹಿರಾ ಮಣಿಮುಂಡ,ಶಿಹಾಬ್ ಎಂಕೆ, ಲಕ್ಷ್ಮಣ ಪ್ರತಾಪನಗರ, ಅಶ್ರಫ್ ಪಚ್ಲಂಪಾರ, ಝೈನುದ್ದೀನ್ ಹೇರೂರು, ಇಸ್ಮಾಯಿಲ್ ಬೇಕೂರು, ಇಬ್ರಾಹಿಂ ಕೋಟಾ, ಮುಹಮ್ಮದ್ ಮೇರ್ಕಳ, ಯೂಸುಫ್ ಮುಟ್ಟಂ, ಶಫೀಕ್, ರಿಯಾಝ್ ಆಲಕ್ಕೋಡ್, ಶಫೀಕ್ ಪಚ್ಚಂಬಳ, ರಝಾಕ್, ಮುಹಮ್ಮದ್ ಹನೀಫ್ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಮೊಯಿನ್ ಪೂನಾ ಸ್ವಾಗತಿಸಿ, ಶ್ರೀ ರಾಜೇಶ್ ಹೇರೂರು ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!