ಕಾಸರಗೋಡು:ಕೇರಳ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಪಿಣರಾಯಿ ವಿಜಯನ್ ರನ್ನು ಇಂದು ಭೇಟಿ ಮಾಡಿ ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಮನವಿ ಸಲ್ಲಿಸಲಾಯಿತು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ, ಶ್ರೀ ಪ್ರಕಾಶ ಮತ್ತೀಹಳ್ಳಿ, ಕಾಸರಗೋಡು ಶಾಸಕರಾದ ಶ್ರೀ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕರಾದ ಶ್ರೀ ಎ.ಕೆ.ಎಂ. ಅಶ್ರಫ್, ಶ್ರೀ ಎ.ಆರ್. ಸುಬ್ಬಯ್ಯ ಕಟ್ಟೆ, ಸದಸ್ಯರು, ಗಡಿ ಪ್ರಾಧಿಕಾರ ಹಾಗೂ ಇತರೆ ಕನ್ನಡಿಗರು ಜೊತೆಗಿದ್ದರು ಹಾಗೂ ಬದಿಯಡ್ಕದ ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಸಾಂಸ್ಕೃತಿಕ ಭವನದ ಉದ್ಘಾಟನೆಗೆ ಕೇರಳದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕೇರಳ ವಿಧಾನಸಭೆಯ ಸ್ಪೀಕರ್ ರಾದ ಶಂಶೀರ್ ರವರನ್ನು ಹಾಗೂ ಕೇರಳ ವಿಧಾನಸಭೆಯ ವಿರೋದ ಪಕ್ಷದ ನಾಯಕರಾದ . ವಿ ಡಿ ಸತೀಶನ್ ರವರನ್ನು ಭೇಟಿ ಮಾಡಲಾಯಿತು.
ಕಾಸರಗೋಡು ಕನ್ನಡಿಗರ ಪ್ರಮುಖ ಬೇಡಿಕೆಗಳು.
- ರಾಷ್ಟ್ರೀಯ ಹೆದ್ದಾರಿ/ ರೇಲ್ವೆ ಸ್ಟೇಷನ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ.
- ಕೇರಳದ ನೇಮಕಾತಿಗಳಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನಿಯಮಾನುಸಾರ ಮೀಸಲಾತಿ.
- ರೇಶನ್ ಕಾರ್ಡ್/ಮತದಾರರ ಗುರುತಿನ ಚೀಟಿಗಳಲ್ಲಿ ಕನ್ನಡ ಭಾಷೆ ಅಳವಡಿಕೆ.
- ಬದಿಯಡ್ಕದ ಕಯ್ಯಾರ ಕಿಯ್ಯಣ್ಣ ರೈ ಕನ್ನಡ ಭವನಕ್ಕೆ ರಸ್ತೆ ಸಂಪರ್ಕ.
- ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ.
- ಕಾಸರಗೋಡು ಜಿಲ್ಲೆಗಳಿಗೆ ಕಡ್ಡಾಯವಾಗಿ ಕನ್ನಡ ಶಿಕ್ಷಕರ ನೇಮಕ.
- ಪ್ರಭಾಕರನ್ ಕಮಿಟಿ ವರದಿ ಅನುಷ್ಠಾನ.
- ಕಾಸರಗೋಡು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಇತ್ಯಾದಿ ಮನವಿ ಪತ್ರ ಸಲ್ಲಿಸಲಾಯಿತು ಕಾಸರಗೋಡು ಗಡಿ
ಕಾಸರಗೋಡು ಗಡಿ ಕನ್ನಡಿಗರ ಗಡಿ ಸಮಸ್ಯೆಗಳ ಬಗ್ಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೇರಳ ಸಿಎಂಗೆ ಭೇಟಿ-ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕಾಸರಗೋಡು ಶಾಸಕರಾದ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕರಾದ ಎ.ಕೆ.ಎಂ. ಅಶ್ರಫ್, ಎ.ಆರ್. ಸುಬ್ಬಯ್ಯ ಕಟ್ಟೆ, ಸದಸ್ಯರು, ಗಡಿ ಪ್ರಾಧಿಕಾರ ಇವರುಗಳು ಮನವಿ ಸಲ್ಲಿಸಿದರೆಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.