‘ಮಲೆಯಾಳಿ ಭಾಷಾ ಮಸೂದೆ-2025’ ಜಾರಿಗೆ ಬಂದರೆ ಕನ್ನಡ ಅಸ್ತಿತ್ವಕ್ಕೆ ಕೊಡಲಿ ಏಟು … !

ಗಡಿನಾಡ ಕನ್ನಡಿಗರು ಮತ್ತು ನೆರೆಯ ಕನ್ನಡ ರಾಜ್ಯ ಕರುನಾಡು ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ‘ಮಲೆಯಾಳಿ ಭಾಷಾ ಮಸೂದೆ-2025’ ನ್ನು ಜಾರಿಗೊಳಿಸುವುದನ್ನು ಒಗ್ಗಟ್ಟಾಗಿ ವಿರೋಧಿಸದಿದ್ದರೆ ಕನ್ನಡ ಭಾಷೆಯ ಅಸ್ತಿತ್ವಕ್ಕೆ ದೊಡ್ಡ ಕಂಟಕವೇ ಎದುರಾಗಲಿದೆ . ಕನ್ನಡ ನೆಲವಾಗಿದ್ದ ಕಾಸರಗೋಡು ದುರಂತವಾಗಿ ಕೇರಳಕ್ಕೆ ಸೇರಿದ್ದು , ಇಲ್ಲಿನ ಕನ್ನಡಿಗರು ದಿನ ನಿತ್ಯ ಕಾನೂನು ವೃತ್ತಿಗೆ ಸಮಂಧಿಸಿ ಹತ್ತಾರು ಸಮಸ್ಯೆಯನ್ನು ಎದುರಿಸುತ್ತಿರುವುದು, ನಿನ್ನೆ ಮೊನ್ನೆಯ ಮಾತೇನು ಅಲ್ಲ .

ಇದೀಗ ಇಲ್ಲಿನ ಕನ್ನಡ ಶಾಲೆಗಳ ಅಸ್ತಿತ್ವವನ್ನೇ ಬುಡ ಮೇಲು ಮಾಡುವ ಕ್ರಮವನ್ನು ಕೇರಳ ರಾಜ್ಯ ಸರಕಾರ ಕೈಗೊಳ್ಳಲು ಹೊರಟಿದೆ . ಈ ನಡೆಯನ್ನು ಕನ್ನಡಿಗರು ವಿರೋಧಿಸಬೇಕು . ಸ್ಥಳೀಯ ಜನ ಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತಬೇಕು . ಇಂದು ನಾವು ನಮ್ಮ ಅಸ್ತಿತ್ವಕ್ಕಾಗಿ ಹೋರಾಡದೇ ಇದ್ದರೆ , ದಬ್ಬಾಳಿಕೆಯ ವಿರುದ್ಧ ಸಿಡಿಯದಿದ್ದರೆ , ನಮ್ಮ ಬಾಯಿ ಮೌನವಾದರೆ ನಮ್ಮ ತನಕ್ಕೆ ನಾವೇ ಕೊಳ್ಳಿ ಇಡಬೇಕಾಗುತ್ತೆ . ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಅಸ್ತಿತ್ವಕ್ಕೆ ಕೊಡಲಿ ಏಟು ಬಿದ್ದರೆ ಉರುಳುವುದು ಕಾಸರಗೋಡಿನ ಕನ್ನಡ ಎಂಬ ಶ್ರೀಗಂಧದ ಮರ. ಯುವ ಮನಸುಗಳು ಕನ್ನಡ ಮರೆತರೆ ಕಾಸರಗೋಡು ಮುಂದೊಂದು ದಿನ ಕರುನಾಡಲ್ಲಿ ಇದ್ದ ಇತಿಹಾಸವೇ ಮರೆಯಾಗುತ್ತದೆ.

✍️ಗಿರೀಶ್ ಪಿಎಂ
ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!