ಕುಂಬಳೆ ಅನಂತಪುರ ಪಟಾಕಿ ಗೋದಾಮಿನಲ್ಲಿ ಭಾರೀ ಸ್ಫೋಟ: ಕಟ್ಟಡ ಸಂಪೂರ್ಣ ಧ್ವಂಸ

ಮಂಜೇಶ್ವರ: ಕುಂಬಳೆ ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ಪಟಾಕಿ ನಿರ್ಮಾಣ ಘಟಕ ಅಗ್ನಿಗಾಹುತಿಯಾಗಿ ಬೃಹತ್ ಸ್ಫೋಟದೊಂದಿಗೆ ಕಟ್ಟಡ ಛಿದ್ರ ಛಿದ್ರವಾಗಿದೆ. ಸೋಮವಾರ ಬೆಳಿಗ್ಗೆ 10ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಕೈಗಾರಿಕಾ ಪ್ರಾಂಗಣದಲ್ಲಿ ಕಾರ್ಯಾಚರಿಸುವ ರೆಡ್‌ ಫೋರ್ಟ್ ಸಿಡಿಮದ್ದು ನಿರ್ಮಾಣ ಘಟಕ ದ ಗೋದಾಮಿನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಕಾಸರಗೋಡು ಹಾಗೂ ಉಪ್ಪಳದಿಂದ ಅಗ್ನಿ ಶಾಮಕದಳ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದೆ. ಕಟ್ಟಡ ಸಂಪೂರ್ಣ ಕುಸಿದು ಛಿದ್ರವಾಗಿದೆ. ಜೀವಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!