ಪೈವಳಿಗೆ ಪಂಚಾಯತ್‌ನಲ್ಲಿ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಮತ್ತೆ ಬಿಜೆಪಿ–ಯುಡಿಎಫ್ ಮೈತ್ರಿ ಸ್ಪಷ್ಟವಾಗಿ ಹೊರಹೊಮ್ಮಿದೆ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ನಡೆದ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ಸುಮನಾ ಜಿ. ಭಟ್ ಅವರು ಸಿಪಿಎಂ ಅಭ್ಯರ್ಥಿ ದಿನೇಶ್ವರಿ ನಾಗೇಶ್ ಅವರನ್ನು ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯ ಪ್ರಮುಖ ಬೆಳವಣಿಗೆಯಾಗಿ ಕಾಡಂಕೋಡಿ ವಾರ್ಡ್‌ನ ಮುಸ್ಲಿಂ ಲೀಗ್ ಸದಸ್ಯೆ ಮೈಮುನತುಲ್ ಮಿಸ್ರಿಯಾ ಅವರು ಬಿಜೆಪಿ ಸದಸ್ಯೆ ಸುಮನಾ ಜಿ. ಭಟ್ ಪರವಾಗಿ ಮತ ಚಲಾಯಿಸಿದ್ದು, ಬಿಜೆಪಿ–ಯುಡಿಎಫ್ ನಡುವಿನ ಅಪ್ರತ್ಯಕ್ಷ ಸಹಕಾರ ಮತ್ತೊಮ್ಮೆ ಸಾರ್ವಜನಿಕವಾಗಿ ವ್ಯಕ್ತವಾಗಿದೆ. ಈ ಮತದಾನದಲ್ಲಿ ಸುಮನಾ ಜಿ. ಭಟ್ ಅವರಿಗೆ 3 ಮತಗಳು ಲಭಿಸಿದರೆ, ಸಿಪಿಎಂ ಅಭ್ಯರ್ಥಿ ದಿನೇಶ್ವರಿ ನಾಗೇಶ್ ಅವರಿಗೆ 2 ಮತಗಳು ಮಾತ್ರ ದೊರಕಿವೆ.