ಚಟ್ಟಂಚಾಲ್ ಬಳಿ ಬಿಎಂಡಬ್ಲ್ಯು–ಲಾರಿ ಡಿಕ್ಕಿ: ಮಂಗಳೂರು ಮೂಲದ ಇಬ್ಬರು ಮೃತ್ಯು

ಮಂಜೇಶ್ವರ: ರಾ. ಹೆದ್ದಾರಿಯ ಕಾಸರಗೋಡು ಚಟ್ಟಂಚಾಲ್ ನಲ್ಲಿ ಸೋಮವಾರ ರಾತ್ರಿ ಬಿಎಂಡಬ್ಲ್ಯು ಕಾರು ಮತ್ತು ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.ಮಂಗಳೂರು ಸಜಿಪ ಪರಿಸರವಾಸಿಗಳಾದ ಆಸಿಫ್ ಹಾಗೂ ಲತೀಫ್ ಮೃತ ವ್ಯಕ್ತಿಗಳೆಂದು ಗುರುತಿಸಲಾಗಿದೆ.

ಚಟ್ಟಂಚಾಲ್ ಬಳಿಯ 55ನೇ ಮೃಲ್ ಎಂಬಲ್ಲಿ ಸೋಮವಾರ ರಾತ್ರಿ ಅಪಘಾತ ನಡೆದಿದ್ದು, ಮಂಜೇಶ್ವರ ಗೇರು ಕಟ್ಟೆ ನಿವಾಸಿಗಳಾದ ರಿಯಾಝ್ ಹಾಗೂ ಹಾಶಿಂ ಗಾಯಗೊಂಡಿದ್ದಾರೆ. ವಯನಾಡಿಗೆ ಪ್ರವಾಸ ಹೋಗಿದ್ದ ಗೆಳೆಯರು ಮರಳಿ ಊರಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ಮೃತರು ಕಾರಿನಲ್ಲಿ ಬರುತ್ತಿದ್ದರು. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರೊಳಗೆ ಸಿಲುಕಿದ್ದವರನ್ನು ಜೆಸಿಬಿ ಬಳಸಿ ಹೊರತೆಗೆಯಲಾಗಿತ್ತು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!