ಬದಿಯಡ್ಕದಲ್ಲಿ ಮದುವೆ ಭರವಸೆ ನೀಡಿ ಗಲ್ಫ್ ಉದ್ಯೋಗಿಯ ಪತ್ನಿಗೆ ಕಿರುಕುಳ: ಮೀನು ವ್ಯಾಪಾರಿ ಬಂಧನ

ಬದಿಯಡ್ಕ: ಬದಿಯಡ್ಕದಲ್ಲಿ ಗಲ್ಫ್ ಉದ್ಯೋಗಿಯ ಪತ್ನಿಗೆ ಮದುವೆ ಭರವಸೆ ನೀಡಿ ಕಿರುಕುಳ ನೀಡಿದ ಆರೋಪದ ಮೇಲೆ ಮೀನು ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೀರ್ಚಾಲು ಬೀಜಂತಡ್ಕ ನಿವಾಸಿ ಅಬ್ದುಲ್ ಖಾದರ್ (45) ಬಂಧಿತ ಆರೋಪಿ. 38 ವರ್ಷದ ಯುವತಿಯ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿದ್ದಾರೆ. 2025 ಆಗಸ್ಟ್ 1ರಿಂದ ಆರೋಪಿಯು ಮದುವೆ ಭರವಸೆ ನೀಡಿ ಕಿರುಕುಳ ನೀಡಿದ್ದು, ದೃಶ್ಯಗಳನ್ನು ಪತಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ ಎಂದು ದೂರಲಾಗಿದೆ. ನ್ಯಾಯಾಲಯ ಆರೋಪಿಗೆ ಎರಡು ವಾರಗಳ ರಿಮಾಂಡ್ ವಿಧಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!