ಮಂಜೇಶ್ವರ: ಸ್ನಾನಕ್ಕೆಂದು ಕೆರೆಗೆ ಇಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನೊಂದು ಬಾಲಕನನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾಞಂಗಾಡ್ ನ ಮಾಣಿಕ್ಕೋತ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪಾಲೆಕ್ಕಿ ಅಝೀಝ್ ರವರ ಪುತ್ರ ಆಫಾಝ್(9) ಹಾಗೂ ಹೈದರ್ ರವರ ಪುತ್ರ ಅನ್ವರ್ (11) ಸಾವನ್ನಪ್ಪಿದ ಬಾಲಕರು.
ಅನ್ವರ್ ನ ಸಹೋದರ ಹಾಶಿಮ್ ನನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಣಿಕ್ಕೋತ್ ಪಾಲೆಕ್ಕಿ ಮಸೀದಿಯ ಕೆರೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮಾಹಿತಿ ಅರಿತು ನಾಗರಿಕರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರ ಸಹಾಯದೊಂದಿಗೆ ಬಾಲಕರನ್ನು ಹೊರ ತೆಗೆದರೂ ಇಬ್ಬರು ಸಾವನ್ನಪ್ಪಿದ್ದರು. ಶವ ಶರೀರಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.