ಮಂಜೇಶ್ವರ ಶಾಸಕ. ಮುಟ್ಟಿದೆಲ್ಲ… ಮಂಜೇಶ್ವರದ ಜನತೆಗೆ ವಿರುದ್ಧವಾಗುತ್ತಿದೆ……ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.ಕರ್ನಾಟಕ ಕಾಂಗ್ರೆಸ್ ಸರಕಾರದ ksrtc ಬಸ್ ದರ ಕಾಸರಗೋಡು ಜಿಲ್ಲೆಗೆ ಅಧಿಕ ಮಾಡಿದಾಗ… ಕರ್ನಾಟಕ ದ ತನ್ನದೇ ಮಿತ್ರ ಮಂತ್ರಿಗಳು ಶಾಸಕರನ್ನು, ಕರ್ನಾಟಕ ಸ್ಪೀಕರನ್ನು ಕಂಡು ಕರ್ನಾಟಕ ksrtc ಬಸ್ ದರ ಇಳಿಸಲಾಗದೆ…. ಕಾಂಗ್ರೆಸ್ ನೇತೃತ್ವ ದ ಕರ್ನಾಟಕ ಸರಕಾರದ ವಿರುದ್ಧ ಒಂದು ಮಾತು ಆಡಲಾಗದ ಮಂಜೇಶ್ವರ ಶಾಸಕ…ಅಸಹಾಯಕ ಸ್ಥಿತಿ ಎಂದು ಬಿಜೆಪಿ ಅಭಿಪ್ರಾಯ ಪಟ್ಟಿದೆ.
ಕೇರಳ ಸಾರಿಗೆ ಸಚಿವರನ್ನು ಕಂಡು ಕರ್ನಾಟಕ ಬಸ್ ದರ ಕಡಿಮೆ ಮಾಡುವಂತೆ ಮಾತನಾಡಿದೆನೆಂದು ತನ್ನ ಸಾಮಾಜಿಕ ಜಾಲದಲ್ಲಿ ತನ್ನ ಫೋಟೋ ಹಾಕಿ ಪ್ರಚಾರ ಮಾಡಿ….ಮಂಜೇಶ್ವರ ಶಾಸಕ ತಿರುವನಂತಪುರದಿಂದ ಮಂಜೇಶ್ವರ ಕ್ಕೆ ತಲುಪುವ ಮೊದಲೇ ಕೇರಳ ಸಾರಿಗೆ ಇಲಾಖೆ ಬಸ್ ದರ ಏರಿಕೆ ಮಾಡಿದ್ದು… ಮಂಜೇಶ್ವರ ಶಾಸಕರ ವೈಫಲ್ಯ ಅಲ್ಲದೆ ಮತ್ತೇನು…??? ಬಿಜೆಪಿ ಪ್ರಶ್ನೆಸಿದೆ.ಶಾಸಕನಾಗಿ ಮಂತ್ರಿಗಳನ್ನು ಕಂಡು ಪರಿಹಾರ ಮಾಡಲಾಗದೆ ಬೀದಿಯಲ್ಲಿ ನಾಟಕ ಮಾಡುವುದು…. ಯಾವ ಸಾಮರ್ಥ್ಯ..?
ಟೋಲ್ ವಿಚಾರದಲ್ಲಿ ಶಾಸಕ ಬೀದಿ ನಾಟಕ ಮಾಡಿದ್ದು ಸರಿಯಲ್ಲ ಎಂದು ಕಾಸರಗೋಡು ಸಂಸದರೆ ಹೇಳಿಕೆ ನೀಡಿರುವಾಗ.. 500ಕ್ಕೂ ಹೆಚ್ಚು ನಾಗರಿಕರ ಮೇಲೆ ಕೇಸ್ ಬೀಳುವಂತೆ ಮಾಡಿದ ಮಂಜೇಶ್ವರ ಶಾಸಕರರ ಕಾರ್ಯ ವೈಖರಿ ಸಂಶಯಸ್ಪದ…ಮಂಜೇಶ್ವರ ಶಾಸಕರು ತನ್ನ ರಾಜಕೀಯ ಲಾಭಕಾಗಿ ಟೋಲ್ ನಿಂದ ಬಸ್ ದರ ಏರಿಕೆ ಆಗಿದೆ ಎಂದು ಬಿಂಬಿಸಲು ಕೇರಳ ಸಾರಿಗೆ ಮಂತ್ರಿಯನ್ನು ಕಂಡು ಬಸ್ ದರ ಏರಿಕೆ ಮಾಡಲು ಮನವಿ ಮಾಡಿದ್ದರು ಎಂದು ನಾವು ಸಂಶಯ ಪಡುತೇವೆ. ಎಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.
ಮಂಜೇಶ್ವರ ಶಾಸಕರಿಗೆ ತನ್ನ 5 ವರ್ಷದ ಅವಧಿಯಲ್ಲಿ ಲಿಸ್ಟ್ ಕೂಡ ಇಲ್ಲದ ಖಾಸಗಿ ಕಟ್ಟಡದ ಮೂರನೇ ಮಹಡಿಯಲ್ಲಿ ಇರುವ ಮಂಜೇಶ್ವರ ತಾಲೂಕು ಕಚೇರಿಗೆ ಮೋಕ್ಷ ನೀಡಲು ಆಗಿಲ್ಲ ಎಂದು ಶಾಸಕರ ಕಾರ್ಯವೈಖರಿಯನ್ನು ಲೇವಡಿ ಮಾಡಿದರು ಮಾತ್ರವಲ್ಲ ಮಂಜೇಶ್ವರ ತಾಲೂಕು ಕಚೇರಿಗೆ ಮುಂಭಾಗ ಮೂರನೇ ಮಹಡಿಯಲ್ಲಿ ರಾಶಿ ಹಾಕಲಾಗಿರುವ ಕಸದ ರಾಶಿ ಮಂಜೇಶ್ವರ ದ ಅಭಿವೃದ್ಧಿ ಯ ಸಂಕೇತವೇ ಎಂದು ಬಿಜೆಪಿ ಪ್ರಶ್ನೆಸಿದೆ.