ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ವತಿಯಿಂದ ಅಕ್ಷರ ಕರೋಲ್ ಕಾರ್ಯಕ್ರಮ

ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ತಾಲೂಕು ಮಟ್ಟದ ಅಕ್ಷರ ಕರೋಲ್ ಕಾರ್ಯಕ್ರಮವನ್ನು ನವಯುವಕ ಕಲಾವೃಂದ ಗ್ರಂಥಾಲಯ, ಚಿನಾದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರೀಫ್ ಚಿನಾ ವಹಿಸಿದ್ದರು. ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯರಾದ ಶ್ರೀ ದಾಸಪ್ಪ ಶೆಟ್ಟಿ ಅವರು ಅಕ್ಷರ ಕರೋಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಶ್ರೀ ಕಮಲಾಕ್ಷ ಡಿ ಪ್ರಸ್ತಾವಿಕ ಭಾಷಣ ಮಾಡಿದರು. ಹಿರಿಯರಾದ ಶ್ರೀ ಮೋನಪ್ಪ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಿಂಜ ನೇತೃತ್ವ ಸಮಿತಿ ಕನ್ವೀನರ್ ಶ್ರೀ ರಾಮಚಂದ್ರ ಟಿ, ಶ್ರೀಮತಿ ಶಕೀಲ ಸೇರಿದಂತೆ ಪುಟಾಣಿ ಮಕ್ಕಳು, ತಾಯಂದಿರು ಹಾಗೂ ನಾಗರಿಕರು ಭಾಗವಹಿಸಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಕಾರ್ಯದರ್ಶಿ ಸಂದೀಪ್ ಸ್ವಾಗತಿಸಿದರು. ಉದಯ ಸಿ.ಎಚ್. ವಂದನಾರ್ಪಣೆ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!