ಮಂಜೇಶ್ವರದಲ್ಲಿ ರಸ್ತೆಯ ಬದಿಗೆ ತ್ಯಾಜ್ಯ ಬಿಸಾಡೋದು ಈಗ ‘ರಿಯಾಲಿಟಿ ಶೋ’ ಆಗುತ್ತಿದೆ!
ಹೌದು… ನೀವು ಕೈಯಲ್ಲಿ ಪ್ಲಾಸ್ಟಿಕ್ ಹಿಡಿದು, ತ್ಯಾಜ್ಯ ಬಿಸಾಡೋದು ನಿಮ್ಮ ಯೋಚನೆಯಂತೆ ‘ಸೀಕ್ರೆಟ್’ ಆಗಿರಬಹುದು, ಆದರೆ ಮೆಲೆ ನೋಡಿ – CCTV ಸಾರ್ ನಿಮ್ಮನ್ನು ನೋಡುತ್ತಿದ್ದಾರೆ!
ಮಂಜೇಶ್ವರ ಗ್ರಾಮ ಪಂಚಾಯತ್ ಎಚ್ಚರವಾಗಿದೆ.
ರಸ್ತೆ ಬದಿಗಳಲ್ಲಿ ಕಸ ತ್ಯಾಜ್ಯ ಬಿಸಾಡುವವರನ್ನು ಪತ್ತೆ ಹಚ್ಚಲು, ಹಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪಂಚಾಯತ್ ಕಚೇರಿಯಿಂದ ನೇರವಾಗಿ ಈ ದೃಶ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಕೂಡಾ ರೂಪುಗೊಂಡಿದೆ.
ರಸ್ತೆ ಬದಿಯಲ್ಲಿ ತ್ಯಾಜ್ಯ ಬಿಸಾಡಿದರೆ ಏನಾಗುತ್ತೆ..?
- ದೊಡ್ಡ ಮೊತ್ತದ ದಂಡ ನೇರವಾಗಿ ನಿಮ್ಮ ಜೇಬಿಗೆ ಬೀಳ್ತದೆ.
- ಕಸ ಬಿಸಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸಾಧ್ಯತೆ ಇದೆ. ಆದ್ರೆ, ನಿಮ್ಮ ಮಾನ ಮರ್ಯಾದೆ ಹೋದ್ರೆ ಪಂಚಾಯತ್ ಹೊಣೆಗಾರಲ್ಲ!
ಇದನ್ನು ಮಾಡಿ……..
- ಜೈವಿಕ ತ್ಯಾಜ್ಯಗಳನ್ನು ಮನೆಯಲ್ಲಿ ಸಂಸ್ಕರಿಸಿ. ತೋಟಕ್ಕೆ ಗೊಬ್ಬರ ಆಗಲಿ.
- ಪ್ಲಾಸ್ಟಿಕ್, ಹಳೆಯ ಪ್ಯಾಕೆಟ್, ಇತರೆ ಅಜೈವಿಕ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸಂಗ್ರಹಿಸಿ.
- ಹರಿತ ಕರ್ಮಸೇನೆ ಮನೆ ಮನೆಗೆ ಬರುತ್ತಿದ್ದಾರೆ ಅ ಸೌಲಭ್ಯವನ್ನು ಬಳಸಿಕೊಳ್ಳಿ. ಈಗ ಪ್ಲಾಸ್ಟಿಕ್ ಕಸಗಳನ್ನು ತೆಗೆದುಕೊಂಡು ಹೋಗಲು ಹೊಸ ವಾಹನವೂ ಸಜ್ಜಾಗಿದೆ!
ನಮ್ಮ ತ್ಯಾಜ್ಯ – ನಮ್ಮ ಜವಾಬ್ದಾರಿ!
ಸಮಾಜದ ಸ್ವಚ್ಛತೆಯಲ್ಲಿ ನಾವೆಲ್ಲರೂ ಪಾಲುವಹಿಸೋಣ. ದಂಡದಿಂದ ತಪ್ಪಿಸಿಕೊಳ್ಳಲು ಅಲ್ಲ, ನಮ್ಮ ನಾಡು ಇಂದಿಗೂ ಹಸಿರು, ಒಗ್ಗಟ್ಟಿನ ಪ್ರಕಾಶವಾಗಿರಲಿ ಎಂಬ ಗುರಿಯಿಂದ.
ಮಂಜೇಶ್ವರ ಗ್ರಾಮ ಪಂಚಾಯತ್ ನಿಮ್ಮನ್ನು ವೀಕ್ಷಿಸುತ್ತಿದೆ.
ಇನ್ನು ಮುಂದೆ ಯಾರಾದರೂ ತ್ಯಾಜ್ಯ ಬಿಸಾಡೋಕೆ ಹೋಗ್ತಿದ್ದರೆ… ಕೇಳೋಣ,
“ಮೆಲೆ ನೋಡಿದ್ದೀರಾ..? ಸಿಸಿಟಿವಿ ಇದೆ.