ಕುಂಬಳೆ: ಕುಂಬಳೆ ಆರಿಕ್ಕಾಡಿ ಟೋಲ್ ಸಂಗ್ರಹ NH 66 ರಸ್ತೆಯಲ್ಲಿ ಯಾತ್ರೆ ಮಾಡುವವರಿಗೆ ಬಾರಿ ತೊಂದರೆ ಉಂಟು ಮಾಡಿದ್ದು,ಇದಕ್ಕೆದುರಾಗಿ ಸಿಪಿಐಎಂ ಹಾಗೂ ಜನಕೀಯ ಪ್ರತಿಭಟನಾ ಸಮಿತಿ ಹೋರಾಟ ಸಮರ ನಡೆಸಿದ್ದು ಬಿಜೆಪಿ ಸರಕಾರಕ್ಕೆ ಬಿಸಿ ಎಬ್ಬಿಸಿದೆ.ಈಗ ಈ ಟೋಲ್ ನಿಲ್ಲಿಸಲು ಆದೇಶ ಹೊರಡಿಸಿದ ಕೇಂದ್ರ ಬಿಜೆಪಿ ಸರಕಾರವು ಇದುವರೆಗೂ ಹಗಲು ರಾತ್ರಿ ಹೋರಾಟ ನಡೆಸಿದ ನಾಗರಿಕರ ಮೇಲೆ ದಾಖಲಿಸಿದ ಕೇಸು ,ಆರ್ಥಿಕ ನಷ್ಟಗಳನ್ನು ಕೂಡ ಪರಿಹರಿಸಬೇಕಾಗಿದೆ.ಇದುವರೆಗೂ ಸಂಗ್ರಹಿಸಿದ ಟೋಲ್ ಯಾತ್ರಿಕರಿಗೆ ಹಿಂತಿರುಗಿಸಲು ಕೇಂದ್ರ ಸರಕಾರ ತಯಾರಾಗಬೇಕೆಂದು ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕೆ.ಆರ್ ಜಯಾನಂದ ಒತ್ತಾಯಿಸಿದ್ದಾರೆ.