ರೈಲ್ವೇ ಜಾಗದಲ್ಲಿ ಅಕ್ರಮ ಮರ ಕಟಾವು: ಉಪ್ಪಳದ ನಾಲ್ವರು ಆರ್‌ಪಿಎಫ್ ಬಲೆಗೆ

ಮಂಜೇಶ್ವರ: ರೈಲ್ವೇ ಇಲಾಖೆಯ ಸ್ವಾಧೀನದಲ್ಲಿರುವ ಜಾಗದಿಂದ ತೇಗು ಸೇರಿದಂತೆ 11 ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ ಪ್ರಕರಣದಲ್ಲಿ ಉಪ್ಪಳದ ನಾಲ್ಕು ಮಂದಿಯನ್ನು ಆರ್‌ಪಿಎಫ್ ಬಂಧಿಸಿದೆ.

ರೋಶನ್ ಸಮೀರ್, ದಾದಪೀರ್, ಅಬ್ದುಲ್ಲ ಕುಂಣಿ ಹಾಗೂ ರಾಜೇಶ್ ಬಂಧಿತರು. ಮಂಗಳೂರು ಆರ್‌ಪಿಎಫ್ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಕಟಾವು ಮಾಡಿದ ಮರಗಳು, ಸಾಗಾಣಿಕೆ ವಾಹನ ಮತ್ತು ಕತ್ತರಿಸುವ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ರೈಲ್ವೇ ಜಾಗಕ್ಕೆ ಹೊಂದಿಕೊಂಡಿರುವ ಆರೋಪಿಗಳ ಭೂಮಿಯಿಂದ ಕಡಿಯುವ ನೆಪದಲ್ಲಿ ರೈಲ್ವೇ ಭೂಮಿಯಲ್ಲೂ ಮರಗಳನ್ನು ಕಡಿದಿರುವುದು ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!