ಕಾಸರಗೋಡು ಪೇಟೆಯಲ್ಲಿ ಮುಷ್ಕರ ಬೆಂಬಲಿಸಿ ಎಡ ಕಾರ್ಮಿಕರ ಮೆರವಣಿಗೆ; ಸಾರ್ವಜನಿಕ ಸಭೆ

ಕಾಸರಗೋಡು : ಪೇಟೆಯಲ್ಲಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಎಡ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಎಡಪಂಥೀಯ ಕಾರ್ಮಿಕರು ಮತ್ತು ಕಾರ್ಯಕರ್ತರು ಪೇಟೆಯಲ್ಲಿ ಮೆರವಣಿಗೆ ನಡೆಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲ್ ಶಾಸಕ, ಸಿಐಟಿಯು ನಾಯಕರಾದ ಟಿ.ಕೆ. ರಾಜನ್, ಮಣಿ ಮೋಹನನ್, ಗಿರಿ ಕೃಷ್ಣನ್ ಮೊದಲಾದವರು ಭಾಗವಹಿಸಿದ್ದರು.ಹೊಸ ಬಸ್‌ ನಿಲ್ದಾಣದಿಂದ ಪ್ರಾರಂಭವಾದ ಮೆರವಣಿಗೆ ಹಳೆಯ ಬಸ್ ನಿಲ್ದಾಣದಲ್ಲಿ ಕೊನೆಗೊಂಡಿತು. ಈ ಸಂದರ್ಭ ಸಾರ್ವಜನಿಕ ಸಭೆಯೂ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!