ಮಂಜೇಶ್ವರ: ಪಾಲಕ್ಕಾಡ್‌ನಿಂದ ಮಂಜೇಶ್ವರ ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಲಾರಿಯಲ್ಲಿದ್ದ ಮೂರು ಮಂದಿಗೆ ತಂಡವೊಂದು ಮಂಜೇಶ್ವರ ಅಂಡರ್ ಪಾಸ್ ಬಳಿ ಹಲ್ಲೆಗೈದು ಗಂಭೀರ ಗಾಯಗೊಳಿಸಿದ್ದಾರೆ.
ಕಾಸರಗೋಡು ನಿವಾಸಿ ಅಬ್ಬಾಸ್, ಉತ್ತರಪ್ರದೇಶ ನಿವಾಸಿಗಳೂ ಪಾಲಕ್ಕಾಡ್‌ನಲ್ಲಿ ವಾಸಿಸುವ ಫುರ್ಖಾನ್ (47), ದಾವೂದ್ (28) ಎಂಬವರಿಗೆ ಹಲ್ಲೆಗೈದು ಗಾಯಗೊಳಿಸಲಾಗಿದೆ. ಈ ಪೈಕಿ ಫುರ್ಖಾನ್ ಹಾಗೂ ದಾವೂದ್‌ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶನಿವಾರ ಮುಂಜಾನೆ 1.30ರ ವೇಳೆ ಘಟನೆ ನಡೆದಿದೆ.
ಈ ಮೂರು ಮಂದಿ ಪಾಲಕ್ಕಾಡ್‌ನಿಂದ ಜಾನುವಾರು ಗಳನ್ನು ಉದ್ಯಾವರಕ್ಕೆ ತಲುಪಿಸಿ ಅವುಗಳನ್ನು ಉದ್ಯಾವರ ಅಂಡರ್ ಪಾಸ್ ಬಳಿ ಇಳಿಸುತ್ತಿದ್ದಂತೆ ಆಟೋ ರಿಕ್ಷಾ ಹಾಗೂ ಬೈಕ್‌ಗಳಲ್ಲಿ ಬಂದ ತಂಡ ಹಲ್ಲೆಗೈದಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಘಟನೆ ಬಗ್ಗೆ ಅರಿತು ಮಂಜೇಶ್ವರ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದು ಅಷ್ಟರಲ್ಲಿ ತಂಡ ಪರಾರಿಯಾಗಿದೆ. ಬಳಿಕ ಪೊಲೀಸರು ನಡೆಸಿದ ತಪಾಸಣೆ ವೇಳೆ ಅನಿಲ ಕುಮಾರ್ ಎಂಬಾತನ ಮೊಬೈಲ್ ಫೋನ್ ಅಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನ ನೇತೃತ್ವದಲ್ಲಿ ತಂಡ ತಲುಪಿರಬಹು ದೆಂದು ಅಂದಾಜಿಸಿ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.