ಕಣ್ವತೀರ್ಥದಲ್ಲಿ ಮೀನು ಫ್ಯಾಕ್ಟರಿ ವಿರುದ್ಧ ನಾಗರಿಕರಿಂದ ಪ್ರತಿಭಟನೆ

ಕಳೆದ 8 ವರ್ಷಗಳಿಂದ ನಿರಂತರ ಜಲ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಿ ,ಜನವಾಸಕ್ಕೆ ಅಪಾಯಕಾರಿಯಾಗಿ ಕಾರ್ಯಾಚರಿಸುತ್ತಿರುವ ಯುನೈಟೆಡ್ ಸೀ ಪುಡ್ ಫ್ಯಾಕ್ಟರಿ ವಿರುದ್ಧ ಊರ ಸಾರ್ವಜನಿಕರು ಫಾಕ್ಟರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು .ಫಾಕ್ಟರಿಯ ಮಲೀನ ನೀರಿನ ದುಷ್ಪರಿಣಾಮ ಸ್ಥಳೀಯ ವಸತಿಗಳ ನಾಗರಿಕರ ಮೇಲೆ ಆಗುತ್ತಿದೆ ಸೂಕ್ತ ನಿಯಮಗಳನ್ನು ಪಾಲಿಸುತ್ತಿಲ್ಲ. ಎಡೆಬಿಡದೆ ತಾಜ್ಯ ನೀರಿನ ವಾಸನೆ ಸುತ್ತು ಮುತ್ತಲ ಜನರಿಗೆ ರೋಗ ಭೀತಿ ಉಂಟು ಮಾಡುತ್ತಿದೆ.

ಈ ಬಗ್ಗೆ ಹಲವು ಕಾಲದಿಂದ ಪಂಚಾಯತ್‌ಗೆ ದೂರು ಸಲ್ಲಿಸಿದರೂ ಕೂಡ ಯಾವುದೇ ಸ್ಪಂದನೆಗಳು ದೊರೆತಿಲ್ಲ .ಫಾಕ್ಟರಿಯ ಕಾರ್ಯ ನಿರ್ವಹಣೆಯಲ್ಲಿಯೂ ಯಾವುದೇ ಬದಲಾವಣೆಯೂ ಆಗಲಿಲ್ಲ.ಆದ್ದರಿಂದ ಈ ಫ್ಯಾಕ್ಟರಿಯನ್ನು ಮುಚ್ಚುವುದು ಇಲ್ಲವೆ ಸ್ಥಳಾಂತರ ಮಾಡುವ ಅಹವಾಲನ್ನು ಸ್ಥಳೀಯ ನಾಗರೀಕರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಒಂದು ವೇಳೆ ಸೂಕ್ತ ಪರಿಹಾರ ಕ್ರಮ ದೊರೆಯದಿದ್ದಲ್ಲಿ ನಿರಂತರ ಪ್ರತಿಭಟನೆ ಮತ್ತು ಕಾನೂನು ಹೋರಾಟದ ಎಚ್ಚರಿಕೆಯನ್ನು ನೀಡಿದರು. ಕಮಾಂಡರ್ ವಿಜಯಕುಮಾರ್, ಪಂಚಾಯತ್ ಸದಸ್ಯರು ಭವೇಶ್ ಬೆಂಗರೆ ಮತ್ತು ಊರ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಂಜೇಶ್ವರ ಪೋಲೀಸ್ ಇಲಾಖೆಯ ಅಧಿಕಾರಿಗಳು ಸಹಕರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!