ಶ್ರಮ ಪಟ್ಟರೆ ಫಲಿತಾಂಶ ಖಚಿತ* – ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನ ಇಕ್ಬಾಲ್

ಮಂಜೇಶ್ವರ: ಜಿಲ್ಲಾ ಪಂಚಾಯತ್ ಯೋಜನೆಯಾದ ಮುನ್ನೇಟಂ ಕಾರ್ಯಕ್ರಮದ ಸಮಾರೋಪ ಸಮಾರಂಭ ಸರಕಾರಿ ಪ್ರೌಢಶಾಲೆ ಮೂಡಂಬೈಲ್ ಇಲ್ಲಿನ ಸಭಾಂಗಣದಲ್ಲಿ ನಡೆಯಿತು.ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತ್ಯೇಕ ತರಗತಿ ನೀಡುವುದರ ಮೂಲಕ ಅವರನ್ನು ಕೂಡಾ ಮುಖ್ಯ ವಾಹಿನಿ ಗೆ ತರುವ ಉದ್ದೇಶವಾಗಿರುತ್ತದೆ. ಮುನ್ನೇಟಂ ವೈವಿಧ್ಯ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ಲಾ ಪಜಿಂಗಾರ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆ ಗೈದ ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ಶ್ರೀಮತಿ ಇರ್ಪಾನ ಇಕ್ಬಾಲ್ ಅವರು ನಾವು ಶ್ರಮ ಪಟ್ಟು ಕಲಿತರೆ ನಮಗೆ ಖಂಡಿತಾ ಅದರ ಫಲಿತಾಂಶ ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ದಯಾವತಿ ಸಾಲ್ಯಾನ್ ರವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಉಷಾ ಪೂಂಜ, ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಜಾರ್ಜ್ ಕ್ರಾಸ್ತ , ಮಂಜೇಶ್ವರ ಬಿಪಿಸಿ ಶ್ರೀ ರಾಜಗೋಪಾಲನ್ , ಬಿ ಬಿ.ಆರ್ ಸಿ ಟ್ರೈನರ್ ಸುಮಯ್ಯ ಟೀಚರ್ , ಬಿ ಆರ್ ಸಿ ಕೋರ್ಡಿನೇಟರ್ ಶ್ರೀಮತಿ ಮೋಹಿನಿ ಟೀಚರ್ , ಮಾತ್ರ್ ಸಂಘದ ಅಧ್ಯಕ್ಷೆ ಶ್ರೀಮತಿ ಅನುಪಮ ನಾಯ್ಕ, ಮುನ್ನೇಟಂ ಕಾರ್ಯ ಕ್ರಮದ ಶಾಲಾ ಕೋರ್ಡಿನೇಟರುಗಳಾದ ಶ್ರೀಮತಿ ಅಂಜಲಿ TV , ಶ್ರೀಮತಿ ಬುಶ್ರ, ಶ್ರೀಮತಿ ಸವಿತಾ ಟೀಚರ್ ಮೊದಲಾದವರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀಮತಿ ನಿವೇದಿತ , ಶ್ರೀಮತಿ ರಮ್ಲಾ ಟೀಚರ್ , ಕುಮಾರಿ ಜಯಲಕ್ಷ್ಮಿ, ಕುಮಾರಿ ಸುಷ್ಮ, ಕುಮಾರಿ ತೀಕ್ಷ ಟೀಚರ್, ಕುಮಾರಿ ಭಾಗ್ಯಲಕ್ಷ್ಮಿ , ಶ್ರೀಮತಿ ಶೈನಿ, ಶ್ರೀಮತಿ ವಿದ್ಯಾ ಹಾಗೂ ಜಾಫರ್ ಸರ್, ಶ್ರೀ ಆರೂನ್ ಸಹಕರಿಸಿದರು. ಶಾಲಾ ಸ್ಟಾಪ್ ಸೆಕ್ರೆಟರಿ ಶ್ರೀಮತಿ ಮೋಹಿನಿ ಟೀಚರ್ ಸ್ವಾಗತಿಸಿರು. ಶ್ರೀ ರಾಜೇಶ್ ಕೊಡ್ಲಮೊಗರು ಧನ್ಯವಾದ ಸಮರ್ಪಿಸಿದರು.. ಶ್ರೀಮತಿ ತ್ರಿಲತ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳಿಗೆ ಲಘು ಉಪಹಾರ ನೀಡಿದ ನಂತರ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು

SHARE
Loading spinner

Leave a Reply

Your email address will not be published. Required fields are marked *

error: Content is protected !!