ಕಾಸರಗೋಡು ಕನ್ನಡ ಗ್ರಾಮದ ಕಾಸರಗೋಡು ಗೋ-ಕುಟೀರದ ಲಾಂಛನ (ಲೋಗೋ) ಆಹ್ವಾನ

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗೋ-ಕುಟೀರವನ್ನು ಸದಾ ನೆನಪಿಸುವ ಲಾಂಛನ (ಲೋಗೋ)ವನ್ನು ಆಹ್ವಾನಿಸಲಾಗಿದೆ.ನಾಡಿನ ಕಲಾವಿದರು, ಕಲಾಸಕ್ತರು,ಕೃಷಿಕರು ಲಾಂಛನವನ್ನು ರಚಿಸಿ, ಶಿವರಾಮ ಕಾಸರಗೋಡು ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ), ಕನ್ನಡ ಗ್ರಾಮ, ಕನ್ನಡ ಗ್ರಾಮರಸ್ತೆ,ಕಾಸರಗೋಡು -671121
ಮೊಬೈಲ್ -9448572016
ಇಮೇಲ್ -shivaramakasaragod@gmail.com ಈ ವಿಳಾಸಕ್ಕೆ ತಲುಪಿಸಬಹುದು.
ಕಾಸರಗೋಡು ಗೋ – ಕುಟೀರದ ಲಾಂಛನವನ್ನು ರಚಿಸಿದವರು ತಮ್ಮ ಹೆಸರು, ವಿಳಾಸ,ಮೊಬೈಲ್ ಸಂಖ್ಯೆ, ಒಂದು ಭಾವಚಿತ್ರವನ್ನು ಜೊತೆಗೆ ಕಳುಹಿಸಬೇಕು.ಕಾಸರಗೋಡು ಗೋ – ಕುಟೀರದ ಉದ್ಘಾಟನಾ ಸಮಾರಂಭ ಮತ್ತು ಪ್ರವೇಶೋತ್ಸವದಂದು ಆಯ್ಕೆಯಾದ ಲಾಂಛನದ ಕಲಾಕಾರರಿಗೆ ಗೌರವಿಸಲಾಗುವುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!