ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ವ್ಯಾಪ್ತಿಯ ವಿವಿಧ ಗ್ರಂಥಾಲಯಗಳು ಮತ್ತು ಶಾಲೆಗಳನ್ನು ಒಳಗೊಂಡ ತಾಲೂಕು ಮಟ್ಟದ ವಿಚಾರಗೋಷ್ಠಿಯು ಇತ್ತೀಚೆಗೆ ಸುಭಾಷ್ ನಗರದ ಬೇಕೂರಿನ ‘ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರರಿ’ಯಲ್ಲಿ ಜರುಗಿತು.
’ಭಾರತೀಯ ಗಣರಾಜ್ಯಕ್ಕೆ ಭಾರತದೊಂದಿಗೆ ಹೇಳಲಿಕ್ಕಿರುವುದು’ ಎಂಬ ಗಂಭೀರ ವಿಷಯದ ಕುರಿತು ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರಿ ಟೀಚರ್ ವಹಿಸಿದ್ದರು. ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷರಾದ ಕೆ.ವಿ. ದಿಲೀಪ್ ಕುಮಾರ್ ಅವರು ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು.
ರಾಜಶ್ರೀ ರೈ ಅವರು ವಿಷಯ ಮಂಡನೆ ಮಾಡಿದರು. ಮುಖ್ಯ ಅತಿಥಿಗಳಾಗಿ ದಾನಪ್ಪ ಶೆಟ್ಟಿ ಮಾಸ್ಟರ್, ಬಶೀರ್, ಮನೋಜ್ ಕುಮಾರ್, ಅಹಮ್ಮದ್ ಹುಸೇನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಈ ವಿಚಾರಗೋಷ್ಠಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.