ಮಂಜೇಶ್ವರ: ಉಪ್ಪಳದ ಪ್ಲಾಟಿನಲ್ಲಿ ವಾಸಿಸುವ ಅಫೀನಾ ಬಾನು (28) ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಬುಧವಾರ ರಾತ್ರಿ ಈ ದುರಂತ ಸಂಭವಿಸಿದೆ. ಅಫೀನಾ ಅವರ ಪತಿ ಮುಹಮ್ಮದ್ ತನ್ಸಿಲ್ ನಮಾಜ್ಗಾಗಿ ಮಸೀದಿಗೆ ತೆರಳಿದ್ದ ಸಮಯದಲ್ಲಿ, ಅಫೀನಾ ತಮ್ಮ ಮಲಗುವ ಕೋಣೆಯ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತಿ ಮಸೀದಿಯಿಂದ ಹಿಂತಿರುಗಿದಾಗ ಪತ್ನಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತಳ ತಂದೆಯ ಸಹೋದರ ನೀಡಿದ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.