ಮಂಜೇಶ್ವರ : ಮಂಜೇಶ್ವರ ಶಾಸಕರು ಮುಸ್ಲಿಂ ಸಮುದಾಯ ಮತಗಳ ಕ್ರೂಡಿಕಾರಣಕ್ಕಾಗಿ ಬೇಜವಾಬ್ದಾರಿ ಹಾಗೂ ಅನಗತ್ಯ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ತನ್ನ ಮತ ಬ್ಯಾಂಕ್ ಭದ್ರಪಡಿಸಲು ಕಪಟ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಆರೋಪಿಸಿದರು..
ಇತ್ತೀಚಿಗೆ ದನ ಸಾಗಾಟ ಮಾಡುವ ಕಂಟೈನರ್ ಡ್ರೈವರ್ ಹಾಗೂ ರಿಕ್ಷಾ ಪ್ರಯಾಣಿಕರ ಮದ್ಯೆ ರಾತ್ರಿ ರಸ್ತೆಯಲ್ಲಿ ಉಂಟಾದ ವೈಯಕ್ತಿಕ ವಿಚಾರದಲ್ಲಿ ಉಂಟಾದ ವೈಯಕ್ತಿಕ ಗಲಾಟೆಯನ್ನು ಕೋಮು ಗಲಭೆ ಎಂದು ಹೇಳಿ, ಮಂಜೇಶ್ವರ ದಲ್ಲಿ ಉತ್ತರ ಭಾರತ ಮಾಡೆಲ್ ಎಂದೆಲ್ಲ ಡೈಲಾಗ್ ಬಿಟ್ಟು ಜನರ ಧಾರ್ಮಿಕ ಭಾವನೆ ಯ ಜೊತೆ ಚೆಲ್ಲಾಟ ವಾಡಿ ತನ್ನ ಮತ ಬ್ಯಾಂಕ್ ಬಂದ್ರ ಪಡಿಸಲು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.ದನ ಸಾಗಾಟ ವಾಹನ ಹಾಗೂ ರಿಕ್ಷಾ ಪ್ರಯಾಣಿಕರ ಮದ್ಯೆ ಉಂಟಾದ ಗಲಾಟೆಯಲ್ಲಿ ಪೊಲೀಸ್ ಇಲಾಖೆ 6 ಜನರನ್ನು ಬಂಧಿಸಿ 4 ಜನರ ಹೆಸರನ್ನು ಮಾತ್ರ ಪತ್ರಿಕೆಗಳಿಗೆ ನೀಡಿದೆ.
ಉಳಿದ ಇಬ್ಬರನ್ನು ಪ್ರಾಯ ಪೂರ್ತಿ ಆಗದವರು ಎಂದು ಹೆಸರು ಪ್ರಕಟಿಸಿಲ್ಲ.. ಪ್ರಕರಣದ ಎಲ್ಲಾ ಆರೋಪಿಗಳ ಹೆಸರು ಬಹಿರಂಗ ಪಡಿಸಲು ಬಿಜೆಪಿ ಅಗ್ರಹಿಸುತಿದೆ. ಯಾಕೆಂದರೆ ಹೆಸರು ಪ್ರಕಟಿಸದ ಪ್ರಾಯ ಪೂರ್ತಿ ಆಗದವರ ಹೆಸರು ಬಹಿರಂಗ ವಾದರೆ ಈ ಪ್ರಕರಣದ ಸತ್ಯ ಸತ್ಯತೆ ಹೊರಬರುತ್ತದೆ.ಮಂಜೇಶ್ವರ ಶಾಸಕರು ಹಿಂದೂ ಭೀಕರತೆ ಎಂದು ಬಿಂಬಿಸಲು ಹೊರಟ ಕಪಟ ನಾಟಕವು ಹೊರ ಬರುತ್ತೆ.. ಕೋಮು ಭಾವನೆ ಯಂತಹ ಶೂಕ್ಷ್ಮ ವಿಚಾರವನ್ನು ನಿಯಂತ್ರಣ ಮಾಡಬೇಕಾದ ಜವಾಬ್ದಾರಿ ಯುತ ಶಾಸಕರು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ಅಂದ ನೋಡುವುದಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲಸಮಿತಿ ಮಂಜೇಶ್ವರ ಶಾಸಕರ ಕೀಳು ಮಟ್ಟದ ರಾಜಕೀಯವನ್ನು ಖಂಡಿಸಿದೆ.