ಡಾ. ನಾಗರತ್ನ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ 2026

ಕಾಸರಗೋಡು: ಸಮಾಜ ಸೇವಕಿ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಮಹಿಳಾ ಸೇವಾ ಟ್ರಸ್ಟ್‌ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ನಾಗರತ್ನ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ 2026ಕ್ಕೆ ಆಯ್ಕೆ ಮಾಡಲಾಗಿದೆ.

ಕಾಸರಗೋಡಿನ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ ಈ ಸನ್ಮಾನವನ್ನು Dr. Vaman Rao Bekal ಮತ್ತು ಸಂದ್ಯಾ ರಾಣಿ ಟೀಚರ್ ಅವರ ಸಾರತ್ಯದಲ್ಲಿ ನೀಡಲಾಗುತ್ತಿದೆ.

ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆಯ ಅಂಗವಾಗಿ 22.02.2026 ರಂದು ಕನ್ನಡ ಭವನ ವೇದಿಕೆಯಲ್ಲಿ ನಡೆಯಲಿರುವ “ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026” ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಕುರಿತು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!