ಮಂಜೇಶ್ವರ: ರೈಲು ನಿಲ್ದಾಣದಿಂದ ಬರುತ್ತಿದ್ದ ಕಾರಿಗೆ ಕಾಸರಗೋಡು ಭಾಗದಿಂದ ತಲಪಾಡಿಗೆ ತೆರಳುತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ.
ಶುಕ್ರವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಪೊಸೋಟಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ವರ್ಕಾಡಿ ಮಜೀರ್ ಪಳ್ಳ ನಿವಾಸಿಗಳಾದವ ಪ್ರೀತಮ್ (20), ಪ್ರಜ್ವಲ್ (21), ಕೆಲ್ವಿನ್ (20) ಎಂಬಿ ಗಾಯಗಳಾಗಿದ್ದು, ಈ ಪೈಕಿ ಕೆಲ್ವಿನ್ ಸ್ಥಿತಿ ಗಂಭಿರವಾಗಿದೆ.
ಸ್ಥಳೀಯರು ಕೂಡಲೇ ಗಾಯಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂವರು ಕಾರ್ಯ ನಿಮ್ಮಿತ ಮಂಗಳೂರಿಗೆ ರೈಲಿನಲ್ಲಿ ತೆರಳಳಿದ್ದು, ಅದಕ್ಕಾಗಿ ಕಾರಿನಲ್ಲಿ ಮಂಜೇಶ್ವರ ರೈಲ್ವೆ ಸ್ಟೇಷನ್ ಗೆ ಬಂದಿದ್ದರು. ಆವಾಗಲೇ ರೈಲು ತೆರಳಿದ್ದರಿಂದ ಹಿಂದಿರುಗಿ ತಮ್ಮ ಕಾರಿನಲ್ಲಿ ಊರಿನ ಕಡೆ ಬರುತ್ತಿದ್ದಂತೆ ಈ ಅಪಘಾತ ಸಂಭವಿಸಿದೆ.