ತೃಶೂರ್‌ನ ಕುಖ್ಯಾತ ರೌಡಿಗಳ ಬಂಧನ – ಕುಂಬಳೆಯ ಮನೆಯ ಟೆರೇಸ್ ಮೇಲೆ ಸಿನಿಮಾ ಮಾದರಿಯ ಕಾರ್ಯಾಚರಣೆ

ಮಂಜೇಶ್ವರ : ತೃಶೂರ್‌ನಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಕುಖ್ಯಾತ ರೌಡಿಗಳನ್ನು ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತೃಶೂರ್ ಮತ್ತು ಕುಂಬಳೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಜಾಸ್ (27), ನಿಯಾಸ್ (31) ಮತ್ತು ಗೋಕುಲ್ ಕೃಷ್ಣ (27) ಎಂಬುವವರನ್ನು ಕುಂಡಂಕೆರಡ್ಕದ ಮನೆಯೊಂದರ ಟೆರೇಸ್‌ನಿಂದ ಸಾಹಸಿಕವಾಗಿ ಸೆರೆಹಿಡಿಯಲಾಗಿದೆ.

ಕಳೆದ ಫೆಬ್ರವರಿ 17ರಂದು ಪೆರಿಂಜನಂ ನಿವಾಸಿ ಅನೀಸ್ ಎಂಬವರ ಮನೆಗೆ ನುಗ್ಗಿ ಕಬ್ಬಿಣದ ರಾಡ್‌ಗಳಿಂದ ಭೀಕರವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈ ಮೂವರು ಪ್ರಮುಖ ಆರೋಪಿಗಳಾಗಿದ್ದಾರೆ.ಇಜಾಸ್ ವಿರುದ್ಧ ಮೇಲೆ ಕೊಲೆ ಯತ್ನ, ದರೋಡೆ ಸೇರಿದಂತೆ ಒಟ್ಟು 18 ಪ್ರಕರಣಗಳಿದ್ದು, ಈತನ ವಿರುದ್ಧ ‘ಕಾಪಾ’ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.ನಿಯಾಸ್ ಮತ್ತು ಗೋಕುಲ್ ಕೃಷ್ಣ ಇವರ ವಿರುದ್ಧವೂ ಕೊಲೆ ಯತ್ನ ಹಾಗೂ ಡ್ರಗ್ಸ್ ಮಾಫಿಯಾದಂತಹ ಹಲವಾರು ಗಂಭೀರ ಪ್ರಕರಣಗಳು ದಾಖಲಾಗಿವೆ.

ತೃಶೂರ್ ರೂರಲ್ ಎಸ್.ಪಿ. ಬಿ. ಕೃಷ್ಣಕುಮಾರ್ ಅವರ ಸೂಚನೆಯಂತೆ, ಕುಂಬಳೆ ಎಸ್.ಐ ಅಬ್ದುಲ್ ಸಲಾಮ್ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಗಳಿಗೆ ಆಶ್ರಯ ನೀಡಿದವರ ಬಗ್ಗೆಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!