ಸಿಬ ಮೆಹಂದಿ ಆಯೋಜಿಸಿದ ಮೆಹಂದಿ ಹಾಕುವ ಸ್ಪರ್ಧೆ.ಮಕ್ಕಳ ಕೈಗಳಲ್ಲಿ ಅರಳಿದ ಕಲಾತ್ಮಕ ವಿನ್ಯಾಸಗಳು

ಉಪ್ಪಳ ಬಪ್ಪಾಯತೊಟ್ಟಿಯ ಶೇಖ್ ಅಖ್ತರ್ ಕಳೆದ ನಲವತ್ತು ವರ್ಷಗಳಿಂದ ಮೆಹಂದಿ ವ್ಯಾಪಾರ ನಡೆಸುತ್ತಿದ್ದಾರೆ. ರಮಝಾನ್ ಪ್ರಯುಕ್ತ ಪೆರುನಾಳ್ ಮಾರುಕಟ್ಟೆಗೆ ಮುನ್ನೋಟವಾಗಿ ಸ್ಥಳೀಯ ಮಕ್ಕಳಿಗಾಗಿ ಆಯೋಜಿಸಿದ ಮೈಲಾಂಜಿ ಹಾಕುವ ಸ್ಪರ್ಧೆ ವಿಶೇಷ ಗಮನ ಸೆಳೆಯಿತು.ಕಳೆದ 28 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಸ್ಪರ್ಧೆಯನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸಲಾಗುತ್ತಿದೆ. ಆರಂಭದಲ್ಲಿ ಹತ್ತು ಮಕ್ಕಳಿಗಿಂತ ಕಡಿಮೆ ಸಂಖ್ಯೆಯಲ್ಲಿ ನಡೆದಿದ್ದ ಈ ಸ್ಪರ್ಧೆಯಲ್ಲಿ ಈ ಬಾರಿ ಐವತ್ತಕ್ಕೂ ಹೆಚ್ಚು ಮಕ್ಕಳು ಸಿಬ ಮೆಹಂದಿಯ ಮೈಲಾಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಭಾನುವಾರ ಬೆಳಗ್ಗೆ 9 ಗಂಟೆಗೆ ಆರಂಭವಾದ ಸ್ಪರ್ಧೆ ಮಧ್ಯಾಹ್ನದವರೆಗೆ ಮುಂದುವರಿಯಿತು. ವಿಜೇತರಿಗೆ ಟ್ರೋಫಿ ಸೇರಿದಂತೆ ಬಹುಮಾನಗಳನ್ನು ವಿತರಿಸಲಾಯಿತು. ಬೀವಿ ಬತ್ತೂಲ್ ಮತ್ತು ಮುಸ್ಕಾನ್ ಸ್ಪರ್ಧೆಯನ್ನು ಸಂಯೋಜಿಸಿದರು.ಮನೆಯೊಡನೆ ಹೊಂದಿಕೊಂಡಿರುವ ಮೈಲಾಂಜಿ ಉತ್ಪಾದನಾ ಘಟಕದಲ್ಲಿ ಈ ವರ್ಷದ ಪೆರುನಾಳ್ ಮಾರುಕಟ್ಟೆಗಾಗಿ ಮೆಹಂದಿ ತಯಾರಿಸುವ ಕಾರ್ಯದಲ್ಲಿ ಶೇಖ್ ಅಖ್ತರ್, ಅವರ ಕುಟುಂಬ ಮತ್ತು ಸಿಬ್ಬಂದಿ ತೊಡಗಿದ್ದಾರೆ. ಉತ್ತರ ಪ್ರದೇಶ ಮೂಲದ ಸುಮಾರು ಐದು ಮಂದಿ ಕಾರ್ಮಿಕರು ತಯಾರಿಕೆಯಲ್ಲಿ ಸಹಕರಿಸುತ್ತಿದ್ದಾರೆ.

ಪೆರುನಾಳ್ ಮಾರುಕಟ್ಟೆಯಲ್ಲೇ ಲಕ್ಷಾಂತರ ಮೆಹಂದಿ ಟ್ಯೂಬ್‌ಗಳನ್ನು ಶೇಖ್ ಅಖ್ತರ್ ಮಾರಾಟ ಮಾಡುತ್ತಾರೆ. ಕೇರಳದಲ್ಲಿ ಎರ್ನಾಕುಳಂವರೆಗೆ , ದಕ್ಷಿಣ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿಯೂ ಸಿಬ ಮೆಹಂದಿಗೆ ಉತ್ತಮ ಬೇಡಿಕೆ ಇದೆ ಎಂದು ಅವರು ಹೇಳಿದರು.ಇದಲ್ಲದೆ ಓಣಂ, ವಿಷು ಹಾಗೂ ಕ್ರಿಸ್‌ಮಸ್ ಹಬ್ಬಗಳಲ್ಲಿಯೂ ಮೆಹಂದಿ ಉತ್ತಮವಾಗಿ ಮಾರಾಟವಾಗುತ್ತದೆ. ಕೈಗೆ ಹಾಕುವ ಮೆಹಂದಿಯ ಜೊತೆಗೆ ನಘಗಳಿಗೆ ಬಳಸುವ ಮೆಹಂದಿಯನ್ನೂ ತಯಾರಿಸಲಾಗುತ್ತದೆ.

ನೂರು ಪ್ರತಿಶತ ಪ್ರಕೃತಿದತ್ತವಾದ ತಲೆಗೆ ಬಳಸುವ ಮೆಹಂದಿಯನ್ನೂ ಸಿಬ ಮೆಹಂದಿ ಉತ್ಪಾದಿಸುತ್ತದೆ. ಕಾಸರಗೋಡು ಜಿಲ್ಲೆಯಲ್ಲಿ ಸಿಬ ಮೆಹಂದಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಶೇಖ್ ಅಖ್ತರ್ ತಿಳಿಸಿದ್ದಾರೆ.ಸಾಮಾಜಿಕ ಹಾಗೂ ಜೀವಕಾರುಣ್ಯ ಚಟುವಟಿಕೆಗಳಲ್ಲಿಯೂ ಶೇಖ್ ಅಖ್ತರ್ ಸಕ್ರಿಯರಾಗಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!