ಕಾಸರಗೋಡು ಡಿವೈಎಸ್ಪಿ ಸಿಬಿ ಥಾಮಸ್ ಹಾಗೂ ಎಎಸ್ಐ ಮೋಹನನ್‌ಗೆ ರಾಜ್ಯ ಇಂಟೆಲಿಜೆನ್ಸ್ ಅತ್ಯುತ್ತಮ ಸೇವಾ ಪ್ರಶಸ್ತಿ.ಸೂಕ್ಷ್ಮ ಪ್ರಕರಣಗಳ ತನಿಖೆಯಲ್ಲಿ ಕರ್ತವ್ಯನಿಷ್ಠೆಗೆ ರಾಜ್ಯ ಮಟ್ಟದಲ್ಲಿ ಗೌರವ

ಕಾಸರಗೋಡು: ಕೇರಳ ರಾಜ್ಯ ಇಂಟೆಲಿಜೆನ್ಸ್ ವಿಭಾಗದ ಅತ್ಯುತ್ತಮ ನೌಕರ ಸೇವಾ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯ ಡಿವೈಎಸ್ಪಿ ಸಿಬಿ ಥಾಮಸ್ ಹಾಗೂ ಎಎಸ್ಐ ಮೋಹನನ್ ಅರ್ಹರಾಗಿದ್ದಾರೆ. ಪ್ರಸ್ತುತ ಇವರೀರ್ವರೂ ಕಾಸರಗೋಡು ಜಿಲ್ಲೆಯ ಒಂದೇ ಕಚೇರಿಯಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸುವುದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ನಡೆದಿದೆ.

ಅಪರಾಧ ತನಿಖಾ ಕರ್ತವ್ಯದಲ್ಲಿ ಬದ್ಧತೆ ಮೆರೆದು, ವಿವಾದಿತವಾದ ಅನೇಕ ಸೂಕ್ಷ್ಮ ಪ್ರಕರಣಗಳನ್ನು ಬಯಲಿಗೆಳೆದು ಅಪರಾಧಿಗಳಿಗೆ ಶಿಕ್ಷೆ ದೊರಕಿಸಿಕೊಡುವಲ್ಲಿ ಕರ್ತವ್ಯ ಬದ್ಧತೆ ಮೆರೆದಿರುವುದನ್ನು ಪ್ರಶಸ್ತಿ ಪ್ರದಾನ ಸಂದರ್ಭ ಉಲ್ಲೇಖಿಸಲಾಗಿದೆ.ತಿರುವನಂತಪುರ ತೖಕಾಡ್ ಪೋಲೀಸ್ ಟ್ರೖನಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥ ರವಾಡ ಚಂದ್ರಶೇಖರನ್ ಐಪಿಎಸ್ ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯ ಇಂಟೆಲಿಜೆನ್ಸ್ ಮೇಧಾವಿ ಎಡಿಜಿಪಿ ಪಿ. ವಿಜಯನ್ ಐಪಿಎಸ್, ಪೊಲೀಸ್ ಟ್ರೖನಿಂಗ್ ಐಜಿ ಲಕ್ಷ್ಮಣ ಐಪಿಎಸ್, ಪುಟ್ಟಾ ವಿಮಲಾದಿತ್ಯ ಐಪಿಎಸ್, ಶ್ರೀಶ್ಯಾಂ ಸುಂದರ್ ಐಪಿಎಸ್ ಮೊದಲಾದ ಉನ್ನತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡರು

SHARE
Loading spinner

Leave a Reply

Your email address will not be published. Required fields are marked *

error: Content is protected !!