ಬದಿಯಡ್ಕ ನಿವಾಸಿಗಳಾದ ಗಂಗಾಧರ ಆಚಾರ್ಯ ಮತ್ತು ಶಶಿಕಲಾ ಆಚಾರ್ಯ ದಂಪತಿಯ ಸುಪುತ್ರ ಕಾರ್ತಿಕ್ MG ಆಚಾರ್ಯ ಅವರ ಅಪೂರ್ವ ಕಲಾ ಪ್ರತಿಭೆಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆತಿದೆ.ಕಾರ್ತಿಕ್ MG ಆಚಾರ್ಯ ಅವರ ಕೈಚಳಕದಲ್ಲಿ A/0 ಗಾತ್ರದ (4/3) ಕ್ಯಾನ್ವಾಸ್ ಮೇಲೆ ಕರಿಯಲ್ಲಿ ಅದ್ಭುತವಾಗಿ ಮೂಡಿಬಂದ ಶಿವನ ಕಲಾಕೃತಿ, ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಪಾರ ಪ್ರಶಂಸೆಗೆ ಪಾತ್ರವಾಗಿದೆ.
ಅತ್ಯಂತ ಸೂಕ್ಷ್ಮತೆ, ಭಾವನಾತ್ಮಕ ಅಭಿವ್ಯಕ್ತಿ ಹಾಗೂ ಕಲಾತ್ಮಕ ನೈಪುಣ್ಯತೆಯಿಂದ ರಚಿಸಲ್ಪಟ್ಟ ಈ ಶಿವನ ಚಿತ್ರವು, ಕಲೆಯ ಮೇಲಿನ ಅವರ ಅಪಾರ ಅಭಿರುಚಿ ಮತ್ತು ಸಮರ್ಪಣೆಯ ಪ್ರತೀಕವಾಗಿದೆ.ಈ ಸಾಧನೆಯ ಮೂಲಕ ಕಾರ್ತಿಕ್ MG ಆಚಾರ್ಯ ಅವರು ತಮ್ಮ ಕುಟುಂಬ, ಊರು ಹಾಗೂ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದು, ಸ್ಥಳೀಯರು ಹಾಗೂ ಕಲಾಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.