ಮಂಜೇಶ್ವರ: ಹೊಸಂಗಡಿ ನಿವಾಸಿ ಚಂಚಲಾಕ್ಷಿ ಪದ್ಮನಾಭ ಅವರ ಪುತ್ರಿ ನಿರೀಕ್ಷಾ ಪದ್ಮನಾಭ ಅವರು ಡಾಕ್ಟರೆಟ್ ಪದವಿ ಪಡೆದು ತೀಯಾ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ.
ನಿರೀಕ್ಷಾ ಪದ್ಮನಾಭ ಅವರ ಈ ಶೈಕ್ಷಣಿಕ ಸಾಧನೆಗೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅವರು ತಮ್ಮ ಸಂದೇಶದಲ್ಲಿ, ನಿರೀಕ್ಷಾ ಅವರ ಸಾಧನೆ ಸಮುದಾಯಕ್ಕೆ ಪ್ರೇರಣೆಯಾಗಿದ್ದು, ಅವರು ಇನ್ನಷ್ಟು ಉನ್ನತ ವಿದ್ಯಾಭ್ಯಾಸ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಳಿ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.
ನಿರೀಕ್ಷಾ ಅವರ ಈ ಸಾಧನೆಗೆ ಕುಟುಂಬದವರು, ಸ್ನೇಹಿತರು ಹಾಗೂ ಸಮುದಾಯದ ಸದಸ್ಯರು ಸಂತಸ ವ್ಯಕ್ತಪಡಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ.