ಬೇಕೂರು ಬ್ರಹ್ಮಶ್ರೀ ಮೊಗೇರ ದೈವಸ್ಥಾನದಲ್ಲಿ ಫೆ.28-ಮಾ.1ರಂದು ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ

ಉಪ್ಪಳ : ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಬೇಕೂರು ಇದರ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವವು ಫೆಬ್ರವರಿ 28 ಮತ್ತು ಮಾರ್ಚ್ 1, 2026ರಂದು ಭಕ್ತಿ ಭಾವಪೂರ್ಣವಾಗಿ ಜರುಗಲಿದೆ.

ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಪಚ್ಲಂಪಾರೆ ಇದರ ಗೌರವಾಧ್ಯಕ್ಷರು,ಚೌಡಿ ಚಾಮುಂಡೇಶ್ವರಿ ಆರಾಧಕರು ಹಾಗು ಶ್ರೀ ದೈವದ ಮಧ್ಯಸ್ಥರಾದ ಶ್ರೀ ಬಾಬು ಯು. ಪಚ್ಲಂಪಾರೆ ಅವರ ಕಾರ್ಮಿಕತ್ವದಲ್ಲಿ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ ನಡೆಯಲಿದ್ದು.

ಫೆಬ್ರವರಿ 28ರಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ , 9 ಗಂಟೆಗೆ ನವೀಕೃತ ದೈವಸ್ಥಾನದ ಶುದ್ಧಿಕಲಶ, ಸಂಜೆ 6 ಗಂಟೆಗೆ ಭಂಡಾರ ಏರುವುದು, 7 ಗಂಟೆಗೆ ಗುಳಿಗನ ಕೋಲ,ರಾತ್ರಿ 8.30ಕ್ಕೆ ಅನ್ನ ಸಂತರ್ಪಣೆ, 9 ಗಂಟೆಗೆ ಶ್ರೀ ಮೊಗೇರ ದೈವದ ಭಂಡಾರ ಏರುವುದು ನಡೆಯಲಿದೆ. ರಾತ್ರಿ 9.30ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾತ್ರಿ 11 ಗಂಟೆಯಿಂದ ಮೊಗೇರ ದೈವಗಳ ನೇಮೋತ್ಸವ ಜರುಗಲಿದೆ. ರಾತ್ರಿ 1 ಗಂಟೆಗೆ ತನ್ನಿಮಾನಿಗ ದೈವದ ಅಂಗಣ ಪ್ರವೇಶ ನಡೆದ ಬಳಿಕ ಮಾರ್ಚ್ 1ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ದೈವಗಳಲ್ಲಿ ಹರಕೆ ಸಮರ್ಪಿಸಿ ಸಿರಿಮುಡಿ-ಗಂಧ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ಭಂಡಾರ ಏರುವುದು ಹಾಗೂ 7 ಗಂಟೆಗೆ ಕೊರಗು ತನಿಯ ದೈವದ ಕೋಲ ಜರುಗಲಿದೆ.

ಈ ಪುಣ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ದೈವಸ್ಥಾನದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!