ಡಾ, ಬಿ.ಆರ್ ಕಲಾ ಸಂಘ ,ಅಂಬೇಡ್ಕರ್ ನಗರ ಕುಬಣೂರು ಇದರ ವತಿಯಿಂದ ಸತತ 19ನೇ ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕೋಪಕರಣದ ವಿತರಣಾ ಕಾರ್ಯಕ್ರಮ ಕಲಾ ಸಂಘದಲ್ಲಿ ಜರಗಿತು.
ಯುವ ಕವಿ ಹಾಗೂ ಅಧ್ಯಾಪಕರಾದ ಶ್ರೀ ಹರೀಶ್ ಸುಲಾಯಿ ಒಡ್ಡoಬೆಟ್ಟು,ಅಧ್ಯಾಪಕರಾದ ಶ್ರೀ ಅಶೋಕ್ ಮಾಸ್ಟರ್ ಕೊಡ್ಲಮೊಗರು,ಅಧ್ಯಾಪಕಿ ಸುಹಾಸಿನಿ ಟೀಚರ್,ಅಧ್ಯಾಪಕಿ ನಿವೇದಿತಾ ಟೀಚರ್, ಕಲಾ ಸಂಘದ ಅಧ್ಯಕ್ಷ ಶಿವಪ್ರಸಾದ್,ಮಹಿಳಾಸಂಘದ ಅಧ್ಯಕ್ಷೆ ಸಾವಿತ್ರಿ,ರೈಲ್ವೆ ಉದ್ಯೋಗಿ ಸದಾನಂದ ಕುಬಣೂರು ಶುಭಾಶಂಸನೆಗೈದರು.
ವಿಶ್ವನಾಥ್ ಮಾಸ್ತರ್ ಸ್ವಾಗತಿಸಿ,ಮೋಹಿನಿ ಟೀಚರ್ ವಂದಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿಯಿಂದ ತೊಡಗಿ ಹತ್ತನೆಯ ತರಗತಿಯ ವರೆಗಿನ ಸುಮಾರು 45 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಕಳಿಕೋಪಕರಣ ವಿತರಿಸಲಾಯಿತು.