ಕಾಸರಗೋಡು : ಕಾಸರಗೋಡು ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ವಾರ್ಷಿಕೋತ್ಸವದ ಭಾಗವಾಗಿ ನಡೆದ ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ಡಾ. ವಾಮನ್ ರಾವ್ ಬೇಕಲ್ ಸ್ಥಾಪಿತ ಕನ್ನಡ ಭವನದ “ಚುಟುಕು ಯುಗಾಚಾರ್ಯ ಡಾ. ಎಮ್. ಜಿ. ಆರ್. ಅರಸ್ “ವೇದಿಕೆಯಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಮ್ಮೇಳನ ದ ಸರ್ವತೋಮುಖ ಯಶಸ್ವಿಗೆ ಅಹೋರಾತ್ರಿ ಶ್ರಮಿಸಿದ, ತನು -ಮನ -ಧನ ದಿಂದ ಶ್ರಮಿಸಿದ ಕಾಯಕ ಯೋಗಿ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳರೀಗೆ ಕನ್ನಡ ಭವನ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಇವರು ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಆಶೀರ್ವಚನ ನೀಡಲು ಆಗಮಿಸಿದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಶ್ರೀ ರಮೇಶ ಸ್ವಾಮೀಜಿ ಗೋವಿನಾಳ ಹಾಗೂ ಸಮ್ಮೇಳನ ಸರ್ವಾಧ್ಯಕ್ಷ ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ಹಾಗೂ ಗಣ್ಯಾತಿಗಣ್ಯ ಗಣ್ಯರಿಂದ ಸನ್ಮಾನಿಸಿ ಗೌರವಿಸಿದರು.