ಕುಂಬಳೆ : ನಿರಂತರವಾಗಿ ವಿನಂತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಮಂಜೇಶ್ವರ ಕ್ಷೇತ್ರದ ವಿವಿಧ ಭಾಗಗಳಿಂದ ಕೆಂಪುಕಲ್ಲು ಹಾಗೂ ಮರದ ಕಳ್ಳಸಾಗಣೆ ತಡೆಯಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಹೋರಾಟದ ಭಾಗವಾಗಿ, ಕುಂಬಳೆ ಆರ್‌ಟಿಐ ಕಾರ್ಯಕರ್ತ ಕೇಶವನಾಯಕ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅವರು ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ನೈಸರ್ಗಿಕ ಶೋಷಣೆಗಳ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅನಂತಪುರಂ, ಬಾಯಾರ್ ಹಾಗೂ ಪಾದಕಲ್ಲುವಿನ ವಿವಿಧ ಸ್ಥಳಗಳಿಂದ ಕೆಂಪುಕಲ್ಲು ಹಾಗೂ ಮರಗಳನ್ನು ಕರ್ನಾಟಕ ಹಾಗೂ ತಮಿಳುನಾಡಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕರ್ನಾಟಕದಲ್ಲಿ ಕೆಂಪುಕಲ್ಲು ಗಣಿಗಾರಿಕೆಯನ್ನು ಸರ್ಕಾರ ನಿರ್ಬಂಧಿಸಿದೆ. ಆದರು , ಕರ್ನಾಟಕ ಪಾಸ್ ಬಳಸಿ, ಕರ್ನಾಟಕದಲ್ಲಿ ಲಭ್ಯವಿರುವ ದೊಡ್ಡ ಕಲ್ಲುಗಳನ್ನು ಕತ್ತರಿಸಿ ಕೇರಳದಿಂದ ಕಳ್ಳಸಾಗಣೆ ಮಾಡಿ ಭಾರಿ ಲಾಭದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೇರಳದಲ್ಲಿ 25 ರೂ. ಮೌಲ್ಯದ ಕಲ್ಲಿಗೆ ಕರ್ನಾಟಕದಲ್ಲಿ 70 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಶಂಕಿಸಲಾಗಿದೆ .
ಕಾಸರಗೋಡಿನ ಕಾಡುಗಳಿಂದ ಮರಗಳನ್ನು ಕತ್ತರಿಸಿ, ಸಿಪ್ಪೆ ಸುಲಿದು ಸ್ಥಳೀಯ ಗಿರಣಿಗಳಲ್ಲಿ ಸಂಸ್ಕರಿಸಿ ಬಳಿಕ ತಮಿಳುನಾಡಿನ ಗಿರಣಿಗಳಿಗೆ ಸಾಗಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಕಾಡುಗಳನ್ನು ಕಡಿದು ಹಾಕುವುದರಿಂದ ದೇಶದಲ್ಲಿ ವನ್ಯಜೀವಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಇದೆಲ್ಲದಕ್ಕೂ ಅಂತ್ಯ ಹಾಡಲು ಹಾಗೂ ಕಾಡುಗಳು ಹಾಗೂ ವನ್ಯಜೀವಿಗಳನ್ನು ರಕ್ಷಿಸಲು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳಿದರು.