ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವಕ್ಕೆ ಭವ್ಯ ಚಾಲನೆ

ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಬಲ್ಲಂಗುಡೇಲು ಶ್ರೀ ಪಾಡಾoಗರೆ ಭಗವತೀ ಕ್ಷೇತ್ರ ಪಟ್ಟತ್ತೂರುವಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಳಿಯಾಟ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಾರ್ಚ್ 1ರಿಂದ ಪ್ರಾರಂಭವಾಗುವ ಕಳಿಯಾಟ ಉತ್ಸವವು ಮಾರ್ಚ್ 08ರ ವರೆಗೆ ನಡೆಯಲಿದೆ .


ತರುವಾಯ ನಿನ್ನೆ ಬೆಳಗ್ಗೆ 5:30ಕ್ಕೆ ಕೆಂಡಸೇವೆ , ಬಲಿ ಮೂರ್ತಿದರ್ಶನ, 9:00ಕ್ಕೆ ಧ್ವಜಾರೋಹಣ ಮದ್ಯಾಹ್ನ 12:00ರಿಂದ ಕ್ಷೇತ್ರದ ವತಿಯಿಂದ ಅನ್ನದಾನ ಸೇವೆ ನಡೆಯಿತು,ಮಧ್ಯಾಹ್ನ 2:00ಗೆ “ಚೀರುoಭ ಭಗವತಿ ” ಭಜನಾ ತಂಡ ಉಳ್ಳಾಲ ಇವರಿಂದ ಭಜನೆ ಸಂಕೀರ್ತನೆ ಬಳಿಕ 3:00ಗೆ “ಭಗವತಿ ಭಜನಾ ಮಂಡಳಿ” ಪಟ್ಟತ್ತೂರು ಇವರಿಂದ ಭಜನೆ ಸಂಕೀರ್ತನೆ ನಡೆಯಿತು .

ಸಂಜೆ 6:00ಗೆ ತಾನಂ ಮುಂಬಯ ತೆಯ್ಯಮ್ ವೆಲ್ಲಾಟಂ, ತದನಂತರ ಮಲೆಚಾಮುಂಡಿ ದೈವದ ತೋಟಂ ಜರಗಿತು . ರಾತ್ರಿ 8 ಗಂಟೆಗೆ ಗೆಳೆಯರ ಬಳಗ (ರಿ ) ಬಲ್ಲಂಗುಡೇಲು ಇದರ 34ನೇ ವಾರ್ಷಿಕೋತ್ಸವದ ಪ್ರಯುಕ್ತ ನೃತ್ಯ ವೈಭವ ಹಾಗೂ ಸಂಗೀತ ಸಂಜೆ ನಡೆಯಿತು . ವಿವಿದೆಡೆಯಿಂದ ಬರುವ ಎಲ್ಲ ಭಕ್ತಾದಿಗಳು ಕಳಿಯಾಟ ಮಹೋತ್ಸವಕ್ಕೆ ಭಾಗಿಯಾಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!