ಉಪ್ಪಳ. ಕೆಐಐಎಫ್ಬಿ ನಿಧಿಯಿಂದ 3.90 ಕೋಟಿ ರೂ.ಗಳನ್ನು ಬಳಸಿಕೊಂಡು ಆಧುನಿಕ ರೀತಿಯಲ್ಲಿ ನಿರ್ಮಿಸಲಾದ ಬಹುಮಹಡಿ ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಟ್ಟಡವನ್ನು ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಮಂಜೇಶ್ವರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಗಲ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾಕಿರಣಂ ಯೋಜನೆಯಡಿ ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ರಕ್ಷಣಾ ಕಾರ್ಯಕ್ರಮದ ಭಾಗವಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಕೇರಳದಲ್ಲಿ ಸಾರ್ವಜನಿಕ ಶಿಕ್ಷಣ ಕ್ಷೇತ್ರವು ಶ್ರೇಷ್ಠತೆಯ ಹಾದಿಯಲ್ಲಿದೆ ಹಾಗೂ ದೇಶದಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಇಲ್ಲದಿದ್ದಾಗ ನಮ್ಮ ಪೂರ್ವಜರು ಶಿಕ್ಷಣ ಸಂಸ್ಥೆಗಳನ್ನು ತರಲು ಶ್ರಮಿಸಿದರು ಎಂದು ಶಾಸಕರು ಹೇಳಿದರು. ಪ್ರಾಂಶುಪಾಲ ರಘುರಾಮ ಆಳ್ವ ಕೆ.ಬಿ. ಸ್ವಾಗತಿಸಿದರು.
ಪೈವಳಿಗೆ ಪಂಚಾಯತ್ ಅಧ್ಯಕ್ಷೆ ಬದ್ರುನ್ನಿಸಾ ಸಲೀಂ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀನಾ , ಬ್ಲಾಕ್ ಪಂಚಾಯತ್ ಸದಸ್ಯ ಅಜೀಜ್ ಮೆರಿಕೆ, ಪಂಚಾಯಿತಿ ಸದಸ್ಯರಾದ ರಜಾಕ್ ಚಿಪ್ಪಾರ್, ವಿಶ್ವನಾಥ ಕೆ,ಕಯ್ಯಾರ್, ರಫೀಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.