ಕುಂಬಳೆ: ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಯೆನ್ನಲಾದ ಉಪ್ಪಳ ಸಮೀಪದ ಸೋಂಕಾಲ್ ನಿವಾಸಿಯನ್ನು ಬಂಧಿಸಲಾಗಿದೆ. ಮಂಜೇಶ್ವರ ಪೋಲೀಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ್ಪಳ ಸೋಂಕಾಲಿನ ಎ.ಅಶೋಕ(45) ಎಂಬಾತನನ್ನು ಬಂಧಿಸಿ, ಈತ ಮಲಗುವ ಮಂಚದಡಿಯಲ್ಲಿ ದಾಸ್ತಾನಿರಿಸಿದ್ದ 33.5ಕಿಲೋ ಗಾಂಜ ನಶಪಡಿಸಲಾಗಿದೆ.ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಗಳಲ್ಲಿ ಈತನೂ ಒಬ್ಬನೆಂದು ಪೋಲೀಸರು ತಿಳಿಸಿದ್ದಾರೆ.
ಮಂಜೇಶ್ವರ ಎಸ್.ಐ.ಕೆ.ಆರ್.ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.