ಕುಂಬಳೆ : ಶ್ರೀ ಶ್ರೀ ರವಿಶಂಕರ್ ಗುರು ನೇತೃತ್ವದ ಆರ್ಟ್ ಆಫ್ ಲಿವಿಂಗ್ ಜಿಲ್ಲಾ ನಾಯಕತ್ವದ ಆಶ್ರಯದಲ್ಲಿ ಆಯೋಜಿಸಲಾದ ಶ್ರೀಮದ್ ಭಗವದ್ಗೀತಾ ಜ್ಞಾನ ಸದಸ್ ಮಾರ್ಚ್ 12, 13, 14 ಹಾಗೂ 15 ರಂದು ಕುಂಬಳೆ ನಾರಾಯಣ ಮಂಗಲಂ ಶ್ರೀ ಚಿರುಂಬ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
‘ಭಗವದ್ಗೀತೆಯ ಮೂಲಕ ಜೀವನದಲ್ಲಿ ಯಶಸ್ಸು’ ಎಂಬ ವಿಷಯದ ಕುರಿತು ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ತರಬೇತುದಾರ ಸಾಜಿ ನಿಸಾನ್ ತರಬೇತಿ ನೀಡಲಿದ್ದಾರೆ. ವಿನೀತ್ ವಯನಾಡ್ ಹಾಗೂ ಸಬಿತಾ ಕೊಡುಂಗಲ್ಲೂರ್ ಭಾಗವಹಿಸಲಿದ್ದಾರೆ.
ಪ್ರತಿದಿನ ಸಂಜೆ 5 ರಿಂದ ರಾತ್ರಿ 8 ರವರೆಗೆ ತರಬೇತಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಸ್ಥಳೀಯರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
ರಘುನಾಥ್ ಪೈ, ಡಾ. ಶಾಂಭವಿ ಹಾಗೂ ಸುನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.