ಮಂಜೇಶ್ವರ #ಶಾಸಕರೇ #ನಿಮ್ಮ #ಅನ್ಯಾಯಕ್ಕೆ #ಕ್ಷಮೆ #ಇಲ್ಲ……….

ಕನ್ನಡದ ಪ್ರಥಮ ರಾಷ್ಟ್ರ ಕವಿ ಮಂಜೇಶ್ವರ #ಗೋವಿಂದ #ಪೈಗಳಿಗೆ,ನಾಡೊಜ ಕವಿ #ಕಯ್ಯಾರ #ಕಿಞ್ಞಣ್ಣ #ರೈ ಗಳಿಗೆ ಜನ್ಮ ನೀಡಿದ ನಾಡಿನಲ್ಲಿ ಮಲಯಾಳಂ ಕಡ್ಡಾಯವಾಗಿ ಮಸೂದೆ ಜಾರಿಗೆ ಬರುವ ದಿನ. ಇಂದು ಕೇರಳ ಸರಕಾರ ಜಾರಿಗೆ ತಂದ ಮಲಯಾಳಂ ಭಾಷಾ ಮಸೂದೆ ಜಾರಿಗೆ ಬರುವ ದಿನ ಇಂದು ಆರಾಮಾಭವಾಗಲಿದೆ.

ಕೇರಳದಲ್ಲಿ ಎಡರಂಗ ಸರಕಾರ ಭಾಷಾ ಮಸೂದೆ ಜಾರಿಗೆ ತಂದು ಮಲಯಾಳಂ ಕಡ್ಡಾಯ ಗೊಳಿಸಿರುವುದರಿಂದ ಇನ್ನು ಮುಂದೆ ರಾಜ್ಯದ ಶಾಲೆ ಗಳಲ್ಲಿ ಕಡ್ಡಾಯ ಮಲಯಾಳಂ ಕಲಿಕೆ ಜಾರಿಯಾಗಲಿದೆ ಹಾಗೂ ಪಿ ಎಸ್ ಸಿ ಪರೀಕ್ಷೆ ಮಲಯಾಳಂ ಕಡ್ಡಾಯ ವಾಗುವುದರಿಂದ ಭಾಷಾ ಅಲ್ಪ ಸಂಖ್ಯಾಕರಿಗೆ ಹಾಗೂ ಗಡಿನಾಡು ಕನ್ನಡಿಗರಿಗೆ ಅನ್ಯಾಯ ವಾಗಲಿದೆ. ಸರಕಾರಿ ಉದ್ಯೋಗವು ಗಡಿನಾಡ ಕನ್ನಡಿಗರಿಗೆ ಮರೀಚಿಕೆ ಯಾಗಲಿದೆ.

ಮಾತ್ರವಲ್ಲ ಈ ಕಾಯ್ದೆ ಯಿಂದ ಗಡಿನಾಡಿನ ಸಂಸ್ಕಾರ ಸಂಸ್ಕೃತಿ, ಜೀವನ ಪದ್ಧತಿ ನಾಶ ಆಗಲಿದೆ.ಗಡಿನಾಡಿನ ಕನ್ನಡಿಗರ ಸಾಮೂಹಿಕ ವಲಸೆ ಆರಂಭವಾಗಲಿದೆ.ನಿಯಮ ಸಭೆಯಲ್ಲಿ ಭಾಷಾ ಮಸೂದೆ ಮಂಡನೆ ಆಗುವಾಗ ನಿಯಮ ಸಭೆಯಲ್ಲಿ ಗೈರು ಹಾಜರಾಗಿದ ಮಂಜೇಶ್ವರ ಶಾಸಕ ಅಶ್ರಫ್ ರ ಬೇಜವಾಬ್ದಾರಿ ಕನ್ನಡಿಗರಿಗೆ ಮಾಡಿದ ಅವಮಾನ ಮಾತ್ರವಲ್ಲ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಯೂ ಆಗಿದೆ.

ನಿಯಮ ಸಭೆಯಲ್ಲಿ ಗೈರು ಆಗಿದ್ದು ಮಾತ್ರವಲ್ಲ ನಂತರದ ದಿನಗಳಲ್ಲಿಯೂ ನಿಯಮ ಸಭೆ ಯಲ್ಲಿ ಮಾತನಾಡುವ ಅವಕಾಶ ಇದ್ದಾಗ ಕನ್ನಡ ಪರವಾಗಿ ಮಾತನಾಡದೆ ಸರಕಾರದ ಕಡ್ಡಾಯ ಮಲಯಾಳ ಭಾಷಾ ಮಸೂದೆ ವಿರೋಧಿಸದ ಮಂಜೇಶ್ವರ ಹಾಗೂ ಕಾಸರಗೋಡು ಶಾಸಕರ ಕನ್ನಡ ವಿರೋಧಿ ನೀತಿಗೆ ಗಡಿನಾಡ ಕನ್ನಡಿಗರು ತಕ್ಕ ಉತ್ತರ ನೀಡಬೇಕಾಗಿದೆ.

ಭಾಷಾ ಅಲ್ಪಸಂಖ್ಯಾತರಿಗೆ, ಗಡಿನಾಡಿನ ಜನತೆಗೆ ಸಂವಿಧಾನ ಬದ್ದವಾಗಿ, ಸಿಕ್ಕಿರುವ ಹಕ್ಕನ್ನು ಸದ್ದಿಲದೇ ಕಸಿಯಲಾಗಿದೆ, ಸುಪ್ರೀಂ ಕೋರ್ಟ್ ಗಡಿನಾಡ ಜನತೆಗೆ ನೀಡಿರುವ ಸವಲತ್ತುಗಳ ನಾಶವು ಇಂದಿನಿಂದ ಆರಂಭ ವಾಗಲಿದೆ.ಮಂಜೇಶ್ವರ ಹಾಗೂ ಕಾಸರಗೋಡು ಶಾಸಕರು, ಎಡರಂಗದ ಆಡಳಿತ ನೀತಿಗೆ ಎದುರಾಗಿ ಮಾತನಾಡಿಲ್ಲ ಮಾತ್ರವಲ್ಲ, ಗೈರು ಹಾಜರಾಗಿ ಅನ್ಯಾಯ ವನ್ನು ಮಾಡಿದ್ದಾರೆ.ಒಂದೇ ಒಂದು ಅಕ್ಷಪನೆ ಯನ್ನು ಮಲಯಾಳ ಕಡ್ಡಾಯ ಮಸೂದೆ ಗೆ ವಿರುದ್ಧವಾಗಿ ಮಂಜೇಶ್ವರ, ಶಾಸಕರು ಅಕ್ಷಪನೆ ಸಲ್ಲಿಸಿಲ್ಲ.

ಶಾಸಕರೇ ತಾವು ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ಮಾಡಿರುವ ಅನ್ಯಾಯ ವನ್ನು ನಾವು ಪ್ರಶ್ನೆ ಮಾಡುತ್ತೇವೆ. ನಿಮಗೆ ಉತ್ತರವನ್ನು ನೀಡುತೇವೆ.. ಕನ್ನಡಿಗರ ಶಕ್ತಿಯನ್ನು ಪ್ರದರ್ಶನ ಮಾಡ್ತೇವೆ.

#ಸಿರಿಗನ್ನಡಂ #ಗೆಲ್ಗೆ, #ಸಿರಿಗನ್ನಡಂ #ಬಾಳ್ಗೆ.
ನಮ್ಮ ಭಾಷೆ – ನಮ್ಮ ಗೌರವ!”
“ಗಡಿನಾಡ ಕನ್ನಡಿಗರ ಹಕ್ಕು ಕಾಪಾಡೋಣ!”

“ಭಾಷೆ ಉಳಿದರೆ – ಸಂಸ್ಕೃತಿ ಉಳಿಯುತ್ತದೆ!”
“ಗಡಿನಾಡ ಕನ್ನಡಿಗರಿಗೆ ನ್ಯಾಯ ಬೇಕಾಗಿದೆ, ಹಕ್ಕುಗಳ ಸಂರಕ್ಷಣೆ ಆಗಬೇಕಿದೆ.


✍🏾#ಆದರ್ಶ #ಬಿ #ಎಂ
#ಅಧ್ಯಕ್ಷರು #ಬಿಜೆಪಿ #ಮಂಜೇಶ್ವರ #ಮಂಡಲ

SHARE
Loading spinner

Leave a Reply

Your email address will not be published. Required fields are marked *

error: Content is protected !!