ಮಚ್ಚಂಪಾಡಿ ಜಿ.ಸಿ.ಸಿ ಕೆ.ಎಂ.ಸಿ.ಸಿ ವತಿಯಿಂದ ಭವ್ಯ ‘ಗ್ರ್ಯಾಂಡ್ ಇಫ್ತಾರ್ ಮೀಟ್’

​ಮಂಜೇಶ್ವರ: ಕಾರುಣ್ಯ ಚಟುವಟಿಕೆಗಳಿಗೆ ಹೆಸರಾದ ಮಚ್ಚಂಪಾಡಿ ಜಿ.ಸಿ.ಸಿ ಕೆ.ಎಂ.ಸಿ.ಸಿ ವತಿಯಿಂದ ಮಚ್ಚಂಪಾಡಿ ಸಿ.ಎಚ್. ನಗರದಲ್ಲಿ ‘ಗ್ರ್ಯಾಂಡ್ ಇಫ್ತಾರ್ ಮೀಟ್’ ಆಯೋಜಿಸಲಾಯಿತು. ವಿಧವೆಯರು, ಅನಾಥರು ಹಾಗೂ ರೋಗಿಗಳಿಗೆ ಸಹಾಯಹಸ್ತ ಚಾಚುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಉಸ್ತಾದ್‌ಗಳಿಗೆ ನೀಡಲಾಗುವ ಈದ್ ಉಡುಗೊರೆಯನ್ನು ಹುಸೈನ್ ಮಚ್ಚಂಪಾಡಿ ಅವರು ಜಹಫರ್ ಅವರಿಗೆ ನೀಡುವ ಮೂಲಕ ಉದ್ಘಾಟಿಸಿದರು. ಈ ಬಾರಿ ಹಜ್ ಯಾತ್ರೆಗೆ ತೆರಳುವವರಿಗೆ ಆತ್ಮೀಯ ಸನ್ಮಾನ ಹಾಗೂ ಬೀಳ್ಕೊಡುಗೆ ನೀಡಲಾಯಿತು.ಜಿ.ಸಿ.ಸಿ ಕೆ.ಎಂ.ಸಿ.ಸಿ ಅಧ್ಯಕ್ಷ ಹುಸೈನ್ ಮಚ್ಚಂಪಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಖತೀಬ್ ಮುಹಮ್ಮದ್ ಶರೀಫ್ ಹೈತಮಿ ಉದ್ಘಾಟಿಸಿದರು.

ಮುಸ್ಲಿಂ ಲೀಗ್ ಮುಖಂಡರಾದ ಪಿ.ಎಚ್. ಅಬ್ದುಲ್ ಹಮೀದ್ ಹಾಜಿ, ಬಿ.ಎಂ. ಮುಸ್ತಫಾ, ಹನೀಫ್ ಅಣ್ಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಜೀದ್ ಮಚ್ಚಂಪಾಡಿ ಸ್ವಾಗತಿಸಿ, ಹನೀಫ್ ಮಚ್ಚಂಪಾಡಿ ವಂದಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!