ಮಲಬಾರ್ ಕಲಾ ಸಾಂಸ್ಕೃತಿಕ ವೇದಿಯಿಂದ ಕುಂಬಳೆಯಲ್ಲಿ ಇಫ್ತಾರ್ ಸೌಹಾರ್ದ ಸಭೆ

ಕುಂಬಳೆ: ದುಬೈ ಮೂಲದ ಮಲಬಾರ್ ಕಲಾ ಸಾಂಸ್ಕೃತಿಕ ವೇದಿ ಸಂಘಟನೆಯು ಚೆರ್ಕಳಂ ಅಬ್ದುಲ್ಲಾ ಅವರ ಸ್ಮರಣಾರ್ಥವಾಗಿ ಕುಂಬಳೆಯಲ್ಲಿ ಇಫ್ತಾರ್ ಸೌಹಾರ್ದ ಕೂಟ ಮತ್ತು ಗೌರವ ಸಮಾರಂಭ ಜರಗಿತು

ಪ್ರವಾಸಿ ಲೋಕದಲ್ಲಿಯೂ ಹಾಗೂ ಜನ್ಮನಾಡಲ್ಲಿಯೂ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮಾನವೀಯ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಮಲಬಾರ್ ಕಲಾ ಸಾಂಸ್ಕೃತಿಕ ವೇದಿ, ಈ ವರ್ಷವೂ ರಮಝಾನ್ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ನೆರವೇರಿಸಿದರು . ಬೆಂಗಳೂರು ಅಲ್‌ಫಲಾಹ್ ಫೌಂಡೇಶನ್ ಸಹಯೋಗದಲ್ಲಿ ಈ ವರ್ಷದ ರಮಝಾನ್ ರಿಲೀಫ್ ಹಾಗೂ ಇಫ್ತಾರ್ ಸೌಹಾರ್ದ ಕೂಟ ನಡೆಯಿತು .

ಚೆರ್ಕಳಂ ಅಬ್ದುಲ್ಲಾ: ತುಳುನಾಡಿನ ಇತಿಹಾಸಪುರುಷ’ ಎಂಬ ಶೀರ್ಷಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮವು ಮಾರ್ಚ್ 8, 2026 ಭಾನುವಾರ ಸಂಜೆ 4.30ಕ್ಕೆ ಕುಂಬಳೆಯದ ರಾಯಲ್ ಖುಬಾ ರೆಸ್ಟೋರಂಟ್‌ನಲ್ಲಿ ನಡೆಯಿತು

ಇದು ಕೇವಲ ಇಫ್ತಾರ್ ಸತ್ಕಾರ ಮಾತ್ರವಲ್ಲದೆ, ಕಲೆ, ಕ್ರೀಡೆ, ಸಮಾಜ ಸೇವೆ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗೌರವಿಸುವ ಅಭಿನಂದನಾ ಸಭೆಯೂ ನಡೆಯಿತು

ಸಂಸ್ಥೆಯವರು ಸಮಾಜದ ದುರ್ಬಲ ವರ್ಗಗಳ ನೆರವಿಗೆ ಧಾವಿಸುವುದರ ಜೊತೆಗೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಕೆಲಸದಲ್ಲೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆರ್ಕಳಂ ಅಬ್ದುಲ್ಲಾ ಅವರು ಸಾರಿದ ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಸೌಹಾರ್ದ ಕೂಟಕ್ಕೆ ಎಲ್ಲರೂ ಆಗಮಿಸಬೇಕೆಂದು ಸಂಘಟನೆಯ ಜನರಲ್ ಕನ್ವೀನರ್ ಅಶ್ರಫ್ ಕರ್ಳ ಆಹ್ವಾನ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!