ಎಡನೀರು ಶ್ರೀ ಮಠದಲ್ಲಿ ಭವ್ಯವಾಗಿ ನಡೆದ “ವಿರಾಟ್ ಹಿಂದೂ ಸಂಗಮ”

ಎಡನೀರು: ಎಡನೀರು ಶ್ರೀ ಮಠದ ಪವಿತ್ರ ಪರಿಸರದಲ್ಲಿ ಮಾರ್ಚ್ 8ರಂದು ಭಾನುವಾರ “ವಿರಾಟ್ ಹಿಂದೂ ಸಂಗಮ” ಭಕ್ತಿ ಹಾಗೂ ಸಂಸ್ಕೃತಿಯ ಸಡಗರದಲ್ಲಿ ಭವ್ಯವಾಗಿ ನಡೆಯಿತು. ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.

ಮಧ್ಯಾಹ್ನ 2.30ಕ್ಕೆ ಚೆಂಗಳ ಪಂಚಾಯತ್ ವ್ಯಾಪ್ತಿಯ ವಿವಿಧ ಬಾಲಗೋಕುಲಗಳ ಮಕ್ಕಳಿಂದ ಕುಣಿತ ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಹಿಳಾ ತಂಡಗಳಿಂದ ಕೈಕೊಟ್ಟಕಳಿ ಮತ್ತು ತಿರುವಾದಿರಕಳಿ ನೃತ್ಯ ಪ್ರದರ್ಶನಗಳು ಭಕ್ತರ ಗಮನ ಸೆಳೆದವು.

ಸಂಜೆ 4 ಗಂಟೆಗೆ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿದರು. ನಂತರ ವಿಎಚ್‌ಪಿ ಉತ್ತರ ಸಂಭಾಗ್ ಸಂಘಟನಾ ಕಾರ್ಯದರ್ಶಿ ಜಿಜೇಶ್ ಪಟ್ಟೇರಿ ಅವರು ದಿಕ್ಕೂಚಿ ಭಾಷಣ ಮಾಡಿ ಸಮಾಜದಲ್ಲಿ ಧರ್ಮ, ಸಂಸ್ಕೃತಿ ಮತ್ತು ಏಕತೆಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿರಾಟ್ ಹಿಂದೂ ಸಮಿತಿ ಚೆಂಗಳ ಪಂಚಾಯತ್ ಅಧ್ಯಕ್ಷ ಶಿವಶಂಕರ ನೆಕ್ರಾಜೆ, ಸಾಮಾಜಿಕ ಕಾರ್ಯಕರ್ತರು ಹಾಗೂ ಎಡನೀರು ಮಠದ ವ್ಯವಸ್ಥಾಪಕರಾದ ರಕ್ಷಾಧಿಕಾರಿ ರಾಜೇಂದ್ರ ಕಲ್ಲೂರ, ಕೆ. ಮಾಧವ ಹೇರಳ, ಕಳೆರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ಗುರುವಾಯೂರಿನ ಶ್ರೀ ಬ್ರಹ್ಮಂ ಭಜನ್ಸ್ ತಂಡದಿಂದ ಭಜನೆ ಕಾರ್ಯಕ್ರಮ ನಡೆಯಿತು.

ಭಕ್ತಿ, ಸಂಸ್ಕೃತಿ ಮತ್ತು ಸಮಾಜ ಏಕತೆಯ ಸಂದೇಶ ಸಾರಿದ ಈ ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!