ಪೈವಳಿಕೆ ಕಮ್ಯೂನಿಸ್ಟ್ ನೇತಾರರ ಕೂಟ ನೇತೃತ್ವದಲ್ಲಿ ಇಫ್ತಾರ್ ಸಂಗಮ

ಪೈವಳಿಕೆ: ಪೈವಳಿಕೆ ಕಮ್ಯೂನಿಸ್ಟ್ ನೇತಾರರ ಕೂಟದ ನೇತೃತ್ವದಲ್ಲಿ ಇಫ್ತಾರ್ ಸಂಗಮವನ್ನು ಆಯೋಜಿಸಲಾಯಿತು. ಪೈವಳಿಕೆಯ ಲಾಲ್‌ಬಾಗ್‌ನಲ್ಲಿ ನಡೆದ ಈ ಇಫ್ತಾರ್ ಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿ ಸೌಹಾರ್ದತೆಯ ಸಂದೇಶವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು ಮತ್ತು ಸ್ಥಳೀಯರು ಉಪಸ್ಥಿತರಿದ್ದು, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಕೆ.ಆರ್. ಜಯಾನಂದ, ಪುರುಷೋತ್ತಮ ಬಳ್ಳೂರು, ಹಾರಿಸ್ ಪೈವಳಿಕೆ, ಬಶೀರ್ ಬಿ.ಎ., ವಿನಯ್ ಬಾಯರ್, ಸತ್ತಾರ್ ಬಳ್ಳೂರು, ಅಶೋಕ್ ಭಂಡಾರಿ, ಚಂದ್ರ ನಾಯ್ಕ್ ಸೇರಿದಂತೆ ಹಲವರು ಈ ಇಫ್ತಾರ್ ಸಂಗಮದಲ್ಲಿ ಪಾಲ್ಗೊಂಡಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!