ಕಾಸರಗೋಡು: ಕಾಸರಗೋಡು ಬ್ಲಾಕ್ ಪಂಚಾಯತ್ ಆಡಳಿತ ಸಮಿತಿ ಪಂಚಾಯತ್ ಆವರಣದಲ್ಲಿ ಆಯೋಜಿಸಿದ್ದ ಇಫ್ತಾರ್ ಸ್ನೇಹ ಆತಿಥ್ಯದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಿಂದ ಗಮನಾರ್ಹವಾಗಿ ನಡೆಯಿತು. ಇಂತಹ ಕೂಟಗಳು ಸಮಾಜದಲ್ಲಿ ಸೌಹಾರ್ದ ಮತ್ತು ಸ್ನೇಹವನ್ನು ಬೆಳೆಸಲು ಇಂದಿನ ಕಾಲದಲ್ಲಿ ಬಹಳ ಮಹತ್ವದ್ದಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂಎಲ್ಎ ಎನ್.ಎ.ನೆಲ್ಲಿಕುನ್ನು ಅವರು ಹೇಳಿದರು.ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಅಬ್ದುಲ್ಲ ಕುಂಞ ಚೆರ್ಕಳ ಅಧ್ಯಕ್ಷತೆ ವಹಿಸಿದರು.ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕರ್ಳ ಸ್ವಾಗತಿಸಿದರು.
ಕಲ್ಲಟ್ರ ಮಹೀನ್ ಹಾಜಿ, ಎ. ಅಬ್ದುಲ್ ರಹೀಮಾನ್, ನಿವೃತ್ತ ಅಡಿಷನಲ್ ಎಸ್ಪಿ ಟಿ.ಪಿ. ರಂಜಿತ್, ಡಿವೈಎಸ್ಪಿ ಸಿಬಿ ಥೋಮಸ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಮೋದ್, ಮುನೀರ್ ಹಾಜಿ, ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ಗಳಾದ ದಾಮೋದರನ್ ಮತ್ತು ಫಿರೋಸ್, ಅಡ್ವೊಕೇಟ್ ಜಮಾಲ್, ಅಡ್ವೊಕೇಟ್ ಗೋವಿಂದನ್ ನಾಯರ್, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಉಷಾ ಅರ್ಜುನ್, ಚೆಮ್ ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಯಿಷಾ ಅಬೂಬಕ್ಕರ್, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೊಯ್ದು ಗೋಳಿಯಡ್ಕ, ಮರಿಯ ಮಹೀನ್, ಕುಂಬಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್ ಮೊದಲಾದವರು ಮಾತನಾಡಿದರು.ಬಿಡಿಒ ಜಾನ್ ಡಿಕ್ರೂಸ್ ಧನ್ಯವಾದ ಅರ್ಪಿಸಿದರು.